ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು

Team Newsnap
1 Min Read
Free bus travel for women to be launched from tomorrow: CM ನಾಳೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ: ಸಿಎಂ

ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಲು ರಾಜ್ಯ ಸರ್ಕಾರ ಐದು ಷರತ್ತು ವಿಧಿಸುವ ಸಾಧ್ಯತೆ ಇದೆ.

ಷರತ್ತುಗಳು :

1) ಕರ್ನಾಟಕದ ಬಿಪಿಎಲ್ ಹೊಂದಿರುವ ಮಹಿಳೆಯರಿಗೆ, ರಾಜ್ಯದೊಳಗೆ ಸಂಚರಿಸುವ ಬಸ್ಸುಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

2) ಅನ್ಯ ರಾಜ್ಯಗಳ ಮಹಿಳೆಯರಿಗೆ, ಹೊರರಾಜ್ಯಗಳಿಗೆ ಹೋಗುವ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.

3) ಮಹಿಳೆಯರಿಗೆ ಬಸ್ ಗಳಲ್ಲಿ ಪ್ರಯಾಣಿಸಲು ಪ್ರತ್ಯೇಕ ಪಾಸ್ ನೀಡಲಾಗುವುದಿಲ್ಲ.
ಪ್ರತ್ಯೇಕ ಪಾಸ್ ಗಳ ಬದಲಿಗೆ, ಮಹಿಳೆಯರು ತಮ್ಮ ಭಾವಚಿತ್ರ ಹಾಗೂ ವಿಳಾಸ ದೃಢೀಕರಣಗೊಳಿಸುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬಹುದಾಗಿದೆ.

4) ಇವುಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಪ್ರಯಾಣಿಸಬಹುದಾಗಿದೆ. ಕರ್ನಾಟಕದಲ್ಲಿ ವಾಸವಿರುವ ಮಹಿಳೆಯರಿಗಷ್ಟೇ ಅವಕಾಶ ಎಂಬ ವಿಚಾರವನ್ನೂ ನಿಯಮಾವಳಿಗಳಲ್ಲಿ ಪ್ರಸ್ತಾಪಿಸಲಾಗಿದೆ.ಒಡಿಶಾ ರೈಲು ಅಪಘಾತ: ಸಿಬಿಐ ತನಿಖೆಗೆ ಶಿಫಾರಸ್ಸು -ಕೇಂದ್ರ ರೈಲ್ವೆ ಸಚಿವ ಪ್ರಕಟ

5) ಹೊರರಾಜ್ಯಗಳಿಂದ ಬರುವ ಮಹಿಳೆಯರಿಗೆ ಇಲ್ಲಿನ ಕೆಎಸ್ಆರ್ ಟಿಸಿಯ ಸಾಮಾನ್ಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ. ಹೊರ ರಾಜ್ಯದಿಂದ ಕರ್ನಾಟಕಕ್ಕೆ ಸಂಬಂಧಿಕರ ಮನೆಗೋ ಅಥವಾ ಪ್ರವಾಸಕ್ಕೋ ಬರುವಂಥ ಮಹಿಳೆಯರಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ. ಇಲ್ಲಿ ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ ಅಥವಾ ಮತದಾರರ ಗುರುತಿನ ಚೀಟಿ ಇದ್ದರೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶವಿರುತ್ತದೆ.

Share This Article
Leave a comment