December 28, 2024

Newsnap Kannada

The World at your finger tips!

THRUTHIYA

ತೃತೀಯ ಲಿಂಗಿಗಳಿಗೆ ತಮಿಳುನಾಡಿನ ಸ್ಥಳೀಯ ಚುನಾವಣೆಯಲ್ಲಿ ಟಿಕೆಟ್​ ಕೊಟ್ಟ BJP – AIADMK

Spread the love

ತಮಿಳುನಾಡಿನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಹಲವು ವಾರ್ಡ್​​ಗಳಲ್ಲಿ ತೃತೀಯ ಲಿಂಗಿಗಳಿಗೆ ಟಿಕೆಟ್ ನೀಡಿವೆ.

ತಮಿಳುನಾಡಿನ 12,838 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ 1,374 ನಗರಪಾಲಿಕೆ ವಾರ್ಡ್​ಗಳು, 3,843 ಪುರಸಭೆ ವಾರ್ಡ್​ಗಳು, 7,621 ಪಟ್ಟಣ ಪಂಚಾಯತ್​ ವಾರ್ಡ್​ಗಳಿಗೆ ಚುನಾವಣೆ ನಡೆಯಲಿದೆ.

ಸೌಥ್ ಚೆನ್ನೈನಿಂದ ಎಐಎಡಿಎಂಕೆ ಅಭ್ಯರ್ಥಿ ಎನ್​.ಜಯದೇವಿ ನಾಮಪತ್ರ ಸಲ್ಲಿಸಿದ್ದಾರೆ. ತಿರುವಿಕಾ ನಗರದ ವಾರ್ಡ್​ ನಂಬರ್ 76ರ ಬಿಜೆಪಿ ಅಭ್ಯರ್ಥಿಯಾಗಿ ರಾಜಮ್ಮ ಕಣಕ್ಕೆ ಇಳಿದಿದ್ದಾರೆ.

ಬಿಜೆಪಿಯ ಅಭ್ಯರ್ಥಿಯಾದ ತೃತೀಯಲಿಂಗಿ ರಾಜಮ್ಮ ಮಾತನಾಡಿ ನನ್ನ ಸಮುದಾಯಕ್ಕೆ ನಾನು ಒಳ್ಳೆಯ ಮಾದರಿಯಾಗುತ್ತೇನೆ. ನಾನು ಆಯ್ಕೆಯಾದರೆ ಕುಡಿಯುವ ನೀರು, ಚರಂಡಿ ಸಮಸ್ಯೆ ಇಂತಹ ಜನರ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದಿದ್ದಾರೆ.

ಎಐಎಡಿಎಂಕೆ ಅಭ್ಯರ್ಥಿ ತೃತೀಯಲಿಂಗಿ ಜಯದೇವಿ ಮಾತನಡಿ ನಾನು ಆಯ್ಕೆಯಾದರೆ ನನ್ನ ವಾರ್ಡ್ಅನ್ನು ಇತರರಿಗೆ ಮಾದರಿಯಾಗುವ ರೀತಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!