ಅಮೆರಿಕ ಸೇನೆಯ ದಾಳಿಗೆ ಹೆದರಿ ಐಸಿಸ್‌ ಮುಖ್ಯಸ್ಥ ಸೇರಿ ಕುಟುಂಬದ 13 ಮಂದಿ ಆತ್ಮಾಹುತಿ

Team Newsnap
1 Min Read

ಅಮೆರಿಕ ಸೇನೆಯ ಭಾರೀ ಕಾರ್ಯಾಚರಣೆಗೆ ಹೆದರಿ ಐಸಿಸ್‌ ಮುಖ್ಯಸ್ಥ ಅಬು ಇಬ್ರಾಹಿಂ ಅಲ್ ಹಾಶಿಮಿ ಅಲ್ ಖುರೈಶಿ ಸೇರಿ 13 ಮಂದಿ ಕುಟುಂಬ ಸದಸ್ಯರು ಆತ್ಮಾಹುತಿ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

2011 ರಲ್ಲಿ ಪಾಕಿಸ್ತಾನದ ಅಬೋಟಾಬಾದ್ ನಗರಕ್ಕೆ ರಹಸ್ಯವಾಗಿ ನುಗ್ಗಿ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ನನ್ನು ಅಮೇರಿಕಾ ಸೇನೆ ಹತ್ಯೆ ಮಾಡಿ ರೀತಿಯಲ್ಲೇ ಅಮೆರಿಕ ಸೇನೆ ಮತ್ತೊಮ್ಮೆ ಕಾರ್ಯಾಚರಣೆ ನಡೆಸಿದೆ.

ಈ ಕಾರ್ಯಾಚರಣೆಗೆ ಹೆದರಿ ಅಲ್‌ ಖುರೈಶಿ ಆತ್ಮಹತ್ಯೆ ಮಾಡಿಕೊಂಡು ಮಾತ್ರವಲ್ಲದೇ ತನ್ನ ಕುಟುಂಬ ಸದಸ್ಯರನ್ನೂ ಸಾಯಿಸಿದ್ದಾನೆ.

ಕಾರ್ಯಾಚರಣೆ ಹೇಗೆ ನಡೆಯಿತು ?

ಸಿರಿಯಾದ ಇದ್ಲಿಬ್‌ ಪ್ರಾಂತ್ಯದ ಅಟ್ಮೇಹ್‌ ನಗರದ ಮನೆಯೊಂದರಲ್ಲಿ ಇಬ್ರಾಹಿಂ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಅಮೆರಿಕ ಸೇನೆಗೆ ಸಿಕ್ಕಿತ್ತು.

ಈ ಮಾಹಿತಿ ಆಧಾರಿಸಿ ವಿಶೇಷ ಪಡೆಗಳೊಂದಿಗೆ ಬುಧವಾರ ರಾತ್ರಿ ರಹಸ್ಯವಾಗಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ದಾಳಿ ನಡೆಸಿದೆ.

ಆಲಿವ್‌ ಮರಗಳಿಂದ ಸುತ್ತುವರೆದ 2 ಅಂತಸ್ತಿನ ಮನೆಯ ಮೇಲೆ ಹೆಲಿಕಾಪ್ಟರ್‌ನಲ್ಲಿ ಇಳಿದ ಅಮೆರಿಕ ಯೋಧರು ಶರಣಾಗುವಂತೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಆತನ ಅಂಗರಕ್ಷಕರು ಅಮೆರಿಕ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಯೋಧರು ದಾಳಿ ನಡೆಸಿದ್ದು ಸುಮಾರು 2 ಗಂಟೆ ಗುಂಡಿನ ಚಕಮಕಿ ನಡೆದಿದೆ.ತಾನು ಸಿಕ್ಕಿಬೀಳುವುದು ಖಚಿತ ಎನ್ನುವುದು ತಿಳಿಯುತ್ತಿದ್ದಂತೆ ಇಬ್ರಾಹಿಂ ತನ್ನ ಕುಟುಂಬ ಸದಸ್ಯರೊಂದಿಗೆ ಬಾಂಬ್‌ ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾನೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಶ್ವೇತ ಭವನದಲ್ಲಿ ಪ್ರತಿಕ್ರಿಯಿಸಿ, ಕಾರ್ಯಾಚರಣೆ ನಡೆಸಿ ಐಸಿಸ್‌ ಮುಖ್ಯಸ್ಥ ಅಬು ಇಬ್ರಾ​ಹಿಂನನ್ನು ಕೊಂದು ಹಾಕಿ​ದ್ದೇವೆ. ಈ ದಾಳಿಯಲ್ಲಿ ನಾಲ್ವರು ಮಹಿಳೆಯರು ಮತ್ತು 6 ಮಕ್ಕಳು ಸೇರಿ 13 ಮಂದಿ ಬಲಿ​ಯಾ​ಗಿದ್ದಾರೆ. ನಮ್ಮ ಸೇನೆಯ ಒಬ್ಬ ಯೋಧ ಸಹ ಗಾಯ​ಗೊಂಡಿಲ್ಲ. ಈ ಕಾರ್ಯಾ​ಚ​ರ​ಣೆ​ಯಲ್ಲಿ ತೊಡ​ಗಿದ್ದ ಯೋಧ​ರೆ​ಲ್ಲರೂ ಸುರ​ಕ್ಷಿ​ತ​ವಾಗಿ ಮರಳಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Leave a comment