ನಕಲಿ ದಾಖಲೆ ಕೊಟ್ಟಿದ್ದೀರಿ:-ತಹಶೀಲ್ದಾರ್ ಅಂಬುಜಾಗೆ ಜನರಿಂದ ಕ್ಲಾಸ್

Team Newsnap
1 Min Read

ನಾವು ನಿಮಗೆ ಕೊಟ್ಟಿರೋದು ಕಷ್ಟಪಟ್ಟಿರುವ ದುಡ್ಡು. ಯಾವುದೇ ಬಿಟ್ಟಿ ದುಡ್ಡಲ್ಲ. ಹಣ ತೆಗೆದುಕೊಳ್ಳುವಾಗ ನಿಮಗೆ ಜ್ಞಾನ ಇರಬೇಕಿತ್ತು. ಹಣ ತೆಗೆದುಕೊಂಡ ಮೇಲೆ ಕೆಲಸ ಮಾಡಿಕೊಡಬೇಕೆಂಬ ಪರಿಜ್ಞಾನ ಇರಬೇಕೆಂದು ಜಿಲ್ಲೆಯ ಶೃಂಗೇರಿ ತಾಲೂಕಿನ ಜನ ತಹಶೀಲ್ದಾರ್ ಅಂಬುಜಾ ಅವರಿಗೆ ಕರೆ ಮಾಡಿ ಕ್ಲಾಸ್ ತೆಗೆದು ಕೊಳ್ಳುವ ಹೊಸ ಅಧ್ಯಾಯ ಆರಂಭವಾಗಿದೆ

ತಹಶೀಲ್ದಾರ್ ಅಂಬುಜಾ ಶೃಂಗೇರಿಯಲ್ಲಿ ಹತ್ತಿಪ್ಪತ್ತಲ್ಲ ಬರೋಬ್ಬರಿ 700ಕ್ಕೂ ಅಧಿಕ ಜನರಿಗೆ ಫಾರಂ 94ಸಿ, 94ಸಿಸಿಯ ನಕಲಿ ಹಕ್ಕುಪತ್ರ ನೀಡಿ ಲಕ್ಷಾಂತರ ರೂಪಾಯಿಗಳನ್ನು ಗುಳುಂ ಮಾಡಿದ್ದಾರೆ ಎಂದು ಶೃಂಗೇರಿಯ ಜನ ಹೇಳುತ್ತಿದ್ದಾರೆ.

ನ್ಯಾಯದ ಕುರ್ಚಿ ಮೇಲೆ ಕೂತ ಇವರು ಅನ್ಯಾಯದ ಕಣ್ಣಾಮುಚ್ಚಾಲೆ ಆಟ ಎಂದು ಅತಿಯಾಯಿತು. ಎಸಿಬಿ ದಾಳಿ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ರು. ಜೈಲಿಗೆ ಹೋಗಿ ಬಂದಿದ್ದರು. ಮುಗ್ಧ ಹಳ್ಳಿಗರಿಗೆ ಆವಾಗಲೇ ಗೊತ್ತಾಗಿದ್ದು ಇವ್ರು ಅಂಗೈಯಲ್ಲಿ ಆಕಾಶ ತೋರಿಸಿದ್ದಾರೆ ಎನ್ನುವುದು.

1, 2, 3 ಲಕ್ಷ ಹೀಗೆ ಲಕ್ಷಗಟ್ಟಲೇ ಹಣ ಪಡೆದು ನಕಲಿ ಹಕ್ಕುಪತ್ರ ನೀಡಿ, ನಾವ್ ಸೇಫ್ ಅಂತ ಸುಮ್ಮನ್ನಿದ್ದರು ಅಂಬುಜ.

ಆದರೆ ನಮಗೆ ಸಿಕ್ಕಿರೋದು ನಕಲಿ ಹಕ್ಕುಪತ್ರ ಗೊತ್ತಾಗುತ್ತಿದ್ದಂತೆ ಜನ ತಹಶೀಲ್ದಾರ್‌ಗೆ ಫೋನ್ ಕ್ಲಾಸ್ ತೆಗೆದುಕೊಳ್ಳಲು ಶುರು ಮಾಡಿದ್ದಾರೆ.

ವಾರದ ಹಿಂದಷ್ಟೆ ತಹಶೀಲ್ದಾರ್ ಕಚೇರಿಯಲ್ಲಿ ಕೆಲ ದಾಖಲೆಗಳ ಕಳ್ಳತನವಾಗಿದೆ. ಕಡತ ಕಳ್ಳತನ ಬೆನ್ನಲ್ಲೇ ತಹಶೀಲ್ದಾರ್ ಕಾರು ಚಾಲಕ ವಿಜೇತ್ ಕೂಡ ಆತ್ಮಹತ್ಯೆ ಶರಣಾದ. ಈ ಆತ್ಮಹತ್ಯೆ ಹಿಂದೆ ಅಧಿಕಾರಿಗಳ ಹಾಗೂ ಬ್ರೋಕರ್‌ಗಳು ಇದ್ದಾರೆಂಬ ಆರೋಪ ಕೇಳಿಬಂದಿತ್ತು.

Share This Article
Leave a comment