December 19, 2024

Newsnap Kannada

The World at your finger tips!

BJP , JDS , Congress

BJP Dhulipata: JDS a fallen petal lಬಿಜೆಪಿ ಧೂಳಿಪಟ: ಎಲೆಯಂತೆ ಉದುರಿದ ದಳ

ಬಿಜೆಪಿ ಧೂಳಿಪಟ: ಎಲೆಯಂತೆ ಉದುರಿದ ದಳ

Spread the love

ಬೆಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿ ಪಕ್ಷವನ್ನು ಧೂಳಿಪಟ ಮಾಡಿದ್ದಾರೆ. ಜಾತ್ಯಾತೀತ ದಳವನ್ನು ಎಲೆ ರೀತಿಯಲ್ಲಿ ಉದುರಿ ಹೋಗುವಂತೆ ಮಾಡಿದ್ದಾರೆ.

ಭ್ರಷ್ಟಚಾರದ ಕಳಂಕ ಹೊತ್ತು, ಜನ ವಿರೋಧಿ ಬಿಜೆಪಿಗೆ ಹಾಗೂ ಹೊಂದಾಣಿಕೆ, ಮೈತ್ರಿ ಸರ್ಕಾರದ ಕನಸು ಕಾಣುತ್ತಿದ್ದ ದಳಪತಿಗಳಿಗೂ ಈ ಬಾರಿ ಮತದಾರರು ತಕ್ಕ ಪಠ ಕಲಿಸಿದ್ದಾರೆ.

ಕಾಂಗ್ರೆಸ್ ಗೆ ರಾಜ್ಯದ ಬಹು ನಿರೀಕ್ಷೆಯಂತೆ ಆಡಳಿತ ಚುಕ್ಕಾಣಿ ಹಿಡಿಯಲು ಒಂದು ಅವಕಾಶ ನೀಡಿದ್ದಾರೆ. ಸ್ಥಿರ ಮತ್ತು ಜನರ ಆಶಯದಂತೆ ಸರ್ಕಾರ ನಡೆಸಲು 135 ಸ್ಥಾನಗಳನ್ನು ಮತದಾರರು ಕಾಂಗ್ರೆಸ್ ನೀಡಿದ್ದಾರೆ. ಕಿತ್ತಾಟ ಮಾಡಿಕೊಂಡು ಜನರು ರೋಸಿ ಹೋಗುದಂತೆ ಆಡಳಿತ ನಡೆಸುವ ಜವಾಬ್ದಾರಿ ಕಾಂಗ್ರೆಸ್ ನಾಯಕರ ಮೇಲಿದೆ.

ರಾಜ್ಯದ ಬಿಜೆಪಿ ನಾಯಕರು ಅತಿಯಾದ ಆತ್ಮವಿಶ್ವಾಸ ಮತ್ತು ಬೇಜವಾಬ್ದಾರಿ ಹೇಳಿಕೆಗಳು, ನಡವಳಿಕೆಗಳು ಸೋಲಿಗೆ ಕಾರಣವಾಗಿದೆ. ಕಾಂಗ್ರೆಸ್ ನ ಭರವಸೆಗಳು ಮತ್ತು ಗ್ಯಾರೆಂಟಿ ಕಾರ್ಡ್ ಗಳಿಗೆ ಮತದಾರರು ಮನಸೋತು ಕಾಂಗ್ರೆಸ್ ಅನ್ನು ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದಾರೆ.

ಬಿಜೆಪಿಗೆ ಬಹುಮತವೇ ಇಲ್ಲ :

ರಾಜ್ಯದಲ್ಲಿ ಇದುವರೆಗೂ ಬಿಜೆಪಿ ಸ್ವತಂತ್ರ್ಯವಾಗಿ ಬಹುಮತದ ಸರ್ಕಾರ ರಚನೆ ಮಾಡೇ ಇಲ್ಲ. 2008 ರಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಸರ್ಕಾರ ಮಾಡಿತ್ತು ನಂತರ ಆಪರೇಷನ್ ಕಮಲದ ಮೂಲಕ 2019 ರಲ್ಲಿ ಸರ್ಕಾರ ರಚನೆ ಮಾಡಿದರು. ಆದರೆ ಇದುವರೆಗೂ ಬಿಜೆಪಿ ಬಹುಮತದ ಸರ್ಕಾರ ಮಾಡಲೇ ಇಲ್ಲ.

ಆದರೆ ಕಾಂಗ್ರೆಸ್ 2004 ರಲ್ಲಿ ಜೆಡಿಎಸ್ ಜೊತೆ ಸೇರಿ ಧರ್ಮಸಿಂಗ್ ಸರ್ಕಾರ ರಚನೆ ಮಾಡಿದರು. ನಂತರ 2008 ರಲ್ಲಿ ಮತ್ತೆ ಜೆಡಿಎಸ್ , ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದರು. 2013 ಹಾಗೂ 2023 ರಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿತು. ಬಿಜೆಪಿಗೆ ಮಾತ್ರ ಇಂತಹ ಅವಕಾಶ ಸಿಗಲೇ ಇಲ್ಲ.

ಧರ್ಮ ತಳಹದಿಯಲ್ಲಿ ಸರ್ಕಾರ ರಚನೆ ಅಸಾಧ್ಯ. ಶೇ 40 ರಷ್ಟು ಭ್ರಷ್ಟಾಚಾರದ ಸರ್ಕಾರ ಎನ್ನುವ ಆರೋಪಗಳು, ಮುಸ್ಲಿಂ ಮೀಸಲಾತಿಯನ್ನು ರದ್ದು ಮಾಡಿರುವ ಸಂಗತಿಗಳು ಸೇರಿದಂತೆ ಲಿಂಗಾಯತ ಸಮುದಾಯ ಈ ಬಾರಿ ಚುನಾವಣೆಯಲ್ಲಿ ಸಾಕಷ್ಟು ಬಿಜೆಪಿಗೆ ಹೊಡೆತ ಕೊಟ್ಟಿವೆ ಎನ್ನುವುದು ಜಗಜ್ಜಾಹೀರವಾಗಿದೆ.ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಅಂತಿಮ ಫಲಿತಾಂಶದ ವಿವರ

ಹತ್ತು ಹಲವಾರು ನಕರಾತ್ಮಕ ಅಂಶಗಳಿಂದ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಿದೆ. ಜೆಡಿಎಸ್ ಕೂಡ ಅತಿಯಾದ ಆತ್ಮ ವಿಶ್ವಾಸ , ಎಲ್ಲವೂ ನನ್ನಿಂದಲೇ ಎಂಬ ನಾಯಕರ ಅಹಂನಿಂದಾಗಿ ದಳ ತರಗೆಲೆಯಂತೆ ಉದುರಿ ಹೋಗಿದೆ.

Copyright © All rights reserved Newsnap | Newsever by AF themes.
error: Content is protected !!