ಮದ್ದೂರಿನಲ್ಲಿ ಅಪರಿಚಿತ ವಾಹನಕ್ಕೆ ಬೈಕ್ ಢಿಕ್ಕಿ : ಕೋಲಾರ , ಕೊಪ್ಪಳದ ಯುವಕರಿಬ್ಬರ ದುರಂತ ಸಾವು

Team Newsnap
1 Min Read
Bike collided with an unknown vehicle in Maddur: tragic death of two youths from Kolar and Koppal ಮದ್ದೂರಿನಲ್ಲಿ ಅಪರಿಚಿತ ವಾಹನಕ್ಕೆ ಬೈಕ್ ಢಿಕ್ಕಿ

ಮದ್ದೂರು : ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮದ್ದೂರು ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಪ್ಲೈಓವರ್ ಮೇಲೆ ನಡೆದಿದೆ.

ಮಣಿ (25), ಜನಾರ್ಧನ ಪೂಜಾರಿ (21) ಮೃತ ಯುವಕರು.

ಮೃತರಿಬ್ಬರು ಕೋಲಾರ, ಕೊಪ್ಪಳ ಜಿಲ್ಲೆಯವರು ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಯುವಕರು ಕೆಲಸ ಮಾಡುತ್ತಿದ್ದರು. ಇಂದು ಬೆಳಗಿನ ಜಾವ ಮೈಸೂರಿಗೆ ತೆರಳುತ್ತಿದ್ದ ವೇಳೆ ಪಲ್ಸರ್​ ಬೈಕ್​ ಚಲಾಯಿಸಿಕೊಂಡು ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಮೃತ ಜನಾರ್ದನ ಕೊಪ್ಪಳದ ಲಿಂಗದಮಂಡಿ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.ಜೂನ್ 30 ಮೈಷುಗರ್ ನಲ್ಲಿ ಕಬ್ಬು ಅರೆಯವ ಕಾರ್ಯ ಆರಂಭ – ಎಂಡಿ

ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment