ಕೊರೋನಾ ನಡುವೆಯೂ ಬಿಹಾರದಲ್ಲಿ ಚುಣಾವಣೆ ನಡೆಸಲು ಆಯೋಗ ಸನ್ನದ್ಧವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಚುಣಾವಣಾ ಆಯುಕ್ತ ಸುನಿಲ್ ಆರೋರಾ
ಬಿಹಾರದಲ್ಲಿ ಒಟ್ಟು ಮೂರು ಹಂತದಲ್ಲಿ ಚುಣಾವಣೆ ನಡೆಯಲಿದೆ. ಅಕ್ಟೋಬರ್ ಅಂತ್ಯ ಹಾಗೂ ನವೆಂಬರ್ ಮೊದಲ ವಾರದಲ್ಲಿ ಚುಣಾವಣೆ ನಡೆಯಲಿದೆ. ಅಕ್ಟೋಬರ್ 28, ನವೆಂಬರ್ 3, ನವೆಂಬರ್ 7 ರಂದು ಚುಣಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದ್ದಾರೆ. ನವೆಂಬರ್ 10 ರಂದು ಚುಣಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.
‘ಮತದಾನದ ಸಮಯವನ್ನು ಸಂಜೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ. 6.7 ಲಕ್ಷ ಫೇಸ್ ಶೀಲ್ಡ್, 23 ಲಕ್ಷ ಜೊತೆ ಕೈಗವಸು, 46 ಲಕ್ಷ ಮಾಸ್ಕ್, 6ಲಕ್ಷ ಪಿಪಿಇ ಕಿಟ್, 7 ಲಕ್ಷ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಆಯೋಗ ತಯಾರು ಮಾಡಿಟ್ಟುಕೊಂಡಿದೆ.
ಕೊರೋನಾ ಸೋಂಕಿತರಿಗೆ ಸಾಯಂಕಾಲ 5 ಗಂಟೆಯ ನಂತರ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.’ ಎಂದು ಚುಣಾವಣಾ ತಯಾರಿಯ ಬಗ್ಗೆ ಸುನಿಲ್ ಆರೋರಾ ಹೇಳಿದರು.
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.