ಎಪಿಎಂಸಿ ಕಾಯ್ದೆ ರೈತ ಪರ – ಸಚಿವ ಸೋಮಶೇಖರ್

Team Newsnap
1 Min Read

ಎಪಿಎಂಸಿ ಕಾಯ್ದೆಯನ್ನು ಆದಷ್ಟು ಬೇಗ ಸದನದಲ್ಲಿ ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ಮಂಡಿಸಲಾಗುವುದು. ಆದರೆ ಯಾವುದೇ ರೈತರಿಗೆ ನಷ್ಟವಾಗಲು ಬಿಡುವದಿಲ್ಲ ಎಂದು ಸಹಕಾರ ಸಚಿವ ಸೋಮಶೇಖರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್ ಯಾವುದೇ ಕಾರಣಕ್ಕೂ ಎಪಿಎಂಸಿಗಳನ್ನು ಮುಚ್ಚುವುದಿಲ್ಲ. ರೈತರ ಅನುಕೂಲಕ್ಕಾಗಿ ಬೆಳೆ ಹಕ್ಕು ಎಂಬುದರ ಮೇಲೆ ಈ ಕಾಯ್ದೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇದೊಂದು ರೈತಪರ ಕಾಯ್ದೆ. ಆದರೆ ಕೆಲವು ಕುಮ್ಮಕ್ಕುಗಳಿಂದ ರೈತ ಸಂಘಟನೆಗಳು ಈ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಎಪಿಎಂಸಿ ಪ್ರಕಾರ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಎಲ್ಲೆಲ್ಲಿ ಎಷ್ಟು ದರ ಎಂದು ಪ್ರಕಟಿಸಲಾಗುತ್ತದೆ. ಆ ದರಕ್ಕೆ ಮಾರಾಟ ಮಾಡಲು ಅವಕಾಶವಿದೆ. ಪಾನ್ ಕಾರ್ಡ್ ಇದ್ದವರು ಮಾತ್ರ ರೈತರ ಬೆಳೆ ಖರೀದಿ‌ ಮಾಡಬಹುದು. ಇದರಿಂದ ಎಪಿಎಂಸಿಗೆ ಯಾವುದೇ ನಷ್ಟ ಇಲ್ಲ ಎಂದರು. ಈವರೆಗೂ ಶೇ.1.5 ರಷ್ಟು ಸೆಸ್ ಸಂಗ್ರಹ ಮಾಡಲಾಗುತ್ತಿತ್ತು. ಈಗ 1 ರೂ.ಗೆ ನಿಗದಿಪಡಿಸಲಾಗಿದೆ. ಮತ್ತೆ ಕ್ಯಾಬಿನೆಟ್ ಗೆ ತಂದು 35 ಪೈಸೆ ನಿಗದಿಪಡಿಸಲಾಗಿದೆ. ಇದರಿಂದ 120 ಕೋಟಿ ಆದಾಯ ಸಂಗ್ರಹವಾಗಲಿದೆ. ಎಪಿಎಂಸಿ ನಿರ್ವಹಣೆಗೆ ಕೊರತೆಯಾದಲ್ಲಿ ಸರ್ಕಾರವೇ ಉಳಿದ ವೆಚ್ಚವನ್ನು ಭರಿಸಲಿದೆ’ ಎಂದು ಅವರು ಹೇಳಿದರು.

‘ಎಪಿಎಂಸಿಗೆ ಏನೆಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂಬುದರ ಬಗ್ಗೆ ಸರ್ಕಾರ ಚರ್ಚೆ ಮಾಡುತ್ತಿದೆ. ಯಾವುದೇ ಎಪಿಎಂಸಿಗಳನ್ನು ಮುಚ್ಚುವದಿಲ್ಲ. ಎಪಿಎಂಸಿ ಗಳನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವುದು ಸುಳ್ಳು’ ಎಂದರು.

Share This Article
Leave a comment