ಗುರು ಸಾರ್ವಭೌಮ ಸೊಸೈಟಿ ಅಕ್ರಮ ಲೆಕ್ಕ ಪರಿಶೀಲನೆಗೆ ಒಪ್ಪದ ಡಿಜಿಪಿ

Team Newsnap
2 Min Read

ಗುರು ಸಾರ್ವಭೌಮ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಹಣಕಾಸಿನ ಲೆಕ್ಕ ಪತ್ರಗಳನ್ನು ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಡಿಜಿಪಿ ಪ್ರವೀಣ್ ಸೂದ್ ನಿರಾಕರಿಸಿದ್ದಾರೆ.

163 ಕೋಟಿಗೂ ಹೆಚ್ಚು ಬೇನಾಮಿ ಸಾಲ ನೀಡಿರುವ ಆರೋಪ ಸೇರಿದಂತೆ ಇತರೆ ಗಮನಾರ್ಹ ಆರೋಪಗಳಿಗೆ ತುತ್ತಾಗಿರುವ ಸಹಕಾರಿ ಸಂಸ್ಥೆಯು ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಿಗೆ ತನ್ನ ಲೆಕ್ಕ ಪರಿಶೋಧನೆ ನಡೆಸುವಂತೆ ಕೇಳಿ ಪತ್ರ ಬರೆದಿತ್ತು. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಲೆಕ್ಕ ಪರಿಶೋಧನೆ ನಡೆಸಲಾಗುವದಿಲ್ಲ ಎಂದು ಡಿಜಿಪಿ ಹೇಳಿದಾಗ ಸಹಕಾರಿ ಸಂಸ್ಥೆ ತನ್ನ ಪತ್ರವನ್ನು ಹಿಂಪಡೆದಿದೆ.

ಏನಿದು ಪ್ರಕರಣ
ಬೆಂಗಳೂರಿನ ಶಂಕರಪುರದಲ್ಲಿನ ಶ್ರೀ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲಿ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ನಿರ್ದೇಶಕರು 2020 ಸೆಪ್ಟೆಂಬರ್ 11ರಂದು ಪತ್ರ ಬರೆದಿದು 2015-16 ರಿಂದ 2018-19 ನೇ ಸಾಲಿನ‌ ಲೆಕ್ಕ ಪತ್ರಗಳ ಮರುಪರಿಶೀಲನೆ ಮಾಡಲು ಕೇಳಿದ್ದರು. ಆ ಸಂದರ್ಭದಲ್ಲಿ‌ ಸಹಕಾರಿ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದ್ದು‌ ಸ್ಪಷ್ಟವಾಗಿತ್ತು.

ಸಹಕಾರಿ‌ ಸಂಸ್ಥೆಯಲ್ಲಿನ ಅಧಿಕಾರಿಗಳು ಹೊಸ ಸದಸ್ಯರನ್ನು ಸೇರಿಸಿಕೊಳ್ಳದೇ ನಕಲಿ ಠೇವಣಿ, ನಕಲಿ ಸದಸ್ಯರ ಹೆಸರು ಸೃಷ್ಠಿಸಿ 163 ಕೋಟಿಗೂ ಅವ್ಯವಹಾರ ನಡೆದಿರುವುದರ ಬಗ್ಗೆ ಎಲ್ಲ ಮಾಹಿತಿಗಳು‌ ದೊರಕಿದ್ದವು.

ಸಹಕಾರಿ‌ ಸಂಸ್ಥೆಯ ಸಿಬ್ಬಂದಿ ಸಿ.ವಿ. ರಾಕೇಶ್ ನಕಲಿ ಸಾಲ ಮತ್ತು ಠೇವಣಿಗಳನ್ನು ಸೃಷ್ಠಿಸಿದ್ದರೆ, ಸಹಕಾರಿ ಸಂಸ್ಥೆಯ ಮಾಜಿ‌ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಎಂ.ಎನ್.ಶ್ರೀಕಾಂತ್ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಶಿರಗಾಲಹಳ್ಳಿ ಯಲ್ಲಿ ಸಹಕಾರಿ ಸಂಸ್ಥೆಗೆ ಜಮೀನು ಖರೀದಿ ಮಾಡಿ ದ್ದಾರೆ, ಸಹಕಾರಿ ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣ ಬಸವನಗುಡಿಯಲ್ಲಿ ನಿವೇಶನ ಖರೀದಿ ಮಾಡಿದ್ದು ಇವೆಲ್ಲವೂ ಸಂಶಯಾಸ್ಪದ ಕ್ರಿಯೆಗಳಾಗಿವೆ. ಇದರ ಬಗ್ಗೆ ಲೆಕ್ಕ ಪರಿಶೋಧನೆ ನಡೆಯಬೇಕು ಎಂದಾಗ ಸಂಸ್ಥೆಯಲ್ಲಿ‌ ನಡೆದ ಎಲ್ಲಾ ಅವ್ಯವಹಾರಗಳು ಬಯಲಿಗೆ ಬಂದಿವೆ.

ಹಾಗೆಯೇ ಸಹಕಾರಿ ಸಂಸ್ಥೆಯು ಪ್ರಾರಂಭವಾದಾಗಿನಿಂದ, ಸಂಸ್ಥೆಯ ಖಾತೆಯಿಂದ ಬೇರೆ ಖಾತೆಗಳಿಗೆ ಇದುವರೆಗೂ 1,18,75,73,258 ರೂಪಾಯಿಗಳು ವರ್ಗಾವಣೆ ಆಗಿದೆ.

ಈಗ ಪೋಲೀಸ್ ಇಲಾಖೆ ವಿಧಿ ವಿಜ್ಞಾನ ಪ್ರಯೋಗಾಲಯ ಲೆಕ್ಕ ಪರಿಶೋಧನೆ ನಡೆಸಲಾಗುವದಿಲ್ಲ ಎಂದು ಹೇಳಿರುವ ಕಾರಣ, ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆಯಲ್ಲಿ ತಜ್ಞರನ್ನು ನೇಮಿಸಿಕೊಳ್ಳಲು ಸಹಕಾರ ಸಮನಘಗಳ ಲೆಕ್ಕ ಪರಿಶೋಧನಾ ಇಲಾಖೆ ನಿರ್ದೇಶಕರಿಗೆ ಸರ್ಕಾರ ಸೆಪ್ಟೆಂಬರ್ 24 ರಂದು ಆದೇಶಿಸಿದೆ.

Share This Article
Leave a comment