ರಾಹುಲ್ ಗಾಂಧಿಗೆ ಬಿಗ್​ ರಿಲೀಫ್ – ಅನರ್ಹತೆ ಶಿಕ್ಷೆಯಿಂದ ಪಾರು ಮಾಡಿದ ಸುಪ್ರೀಂ – ರಾಗಾ ಮತ್ತೆ ಸಂಸದ

Team Newsnap
2 Min Read

ನವದೆಹಲಿ : ಮೋದಿ ಎಂಬ ಸರ್ ನೇಮ್ ಹೊಂದಿರುವ ವ್ಯಕ್ತಿಗಳು ಕಳ್ಳರೇ’ ಎಂಬ ಹೇಳಿಕೆ ನೀಡಿ ನಂತರ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್​ನಿಂದ ಬಿಗ್ ರಿಲೀಫ್ ನೀಡಿದೆ

ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆಯಿಂದ ಬಚಾವ್ ಆಗಿದ್ದಾರೆ, ಕೇರಳದ ವೈಯನಾಡು ಲೋಕಸಭೆ ಕ್ಷೇತ್ರದ ಸಂಸದರಾಗಿ ಮುಂದುವರಿಯಲಿದ್ದಾರೆ. ರಾಹುಲ್​ ಕಿವಿ ಹಿಂಡಿದ ಸುಪ್ರೀಂ ನೀವು ಹೇಳಿಕೆಗಳನ್ನು ನೀಡುವಾಗ ಎಚ್ಚರಿದಿಂದ ಮಾತನಾಡಬೇಕು.

ಅಂದಿನ ನಿಮ್ಮ ಹೇಳಿಕೆ ಒಳ್ಳೆಯ ಉದ್ದೇಶದಿಂದ ಕೂಡಿರಲಿಲ್ಲ. ಇನ್ಮುಂದೆ ಜಾಗೃತೆ ವಹಿಸಿ. ನಿಮ್ಮನ್ನು ಸಂಸದ ಸ್ಥಾನದಿಂದ ಅನರ್ಹತೆ ಮಾಡೋದ್ರಿಂದ ನಷ್ಟ ಆಗಲಿದೆ ಎಂದ ಸುಪ್ರೀಂ ಕೋರ್ಟ್​, ಜೈಲು ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಕೋರ್ಟ್ನ ಈ ತೀರ್ಪಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಸಂಸದ ಸ್ಥಾನದಿಂದ ಮುಂದುವರಿಯಲಿದ್ದಾರೆ. ಅನರ್ಹತೆಯಿಂದ ಪಾರಾಗಿದ್ದಾರೆ. ರಾಹುಲ್ ಗಾಂಧಿ ಮತ್ತೆ ಲೋಕಸಭಾ ಚುನಾವಣೆಗೂ ಸ್ಪರ್ಧಿಸಬಹುದಾಗಿದೆ.

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ, ಕರ್ನಾಟಕದ ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದರು. ಎಲ್ಲಾ ಕಳ್ಳರ ಉಪನಾಮ ಮೋದಿ ಎಂದು ಹೇಗೆ ಬರುತ್ತದೆ ಅಂತಾ ಪ್ರಶ್ನೆ ಮಾಡಿದ್ದರು. ರಾಹುಲ್ ಗಾಂಧಿಯ ಈ ಹೇಳಿಕೆ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಾಗಿತ್ತು,

ಸೂರತ್‌ನ ಸಿಜೆಎಂ ಕೋರ್ಟ್​, ರಾಹುಲ್ ಗಾಂಧಿಗೆ ಮಾರ್ಚ್​ 23 ರಂದು ಎರಡು ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿ, ದಂಡ ಕೂಡ ವಿಧಿಸಿತ್ತು.

ಈ ತೀರ್ಪು ಬೆನ್ನಲ್ಲೇ ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವವೂ ರದ್ದಾಗಿತ್ತು. ಸಿಜೆಎಂ ಕೋರ್ಟ್​ನ ತೀರ್ಪನ್ನು ರಾಹುಲ್ ಗಾಂಧಿ, ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.ಸ್ವಂತ ಕಾರು ಇದ್ದವರಿಗೆ BPL ಕಾರ್ಡ್ ರದ್ದು – ಸಚಿವ K.H ಮುನಿಯಪ್ಪ

ಕೋರ್ಟ್ ತೀರ್ಪನ್ನು ಪರಿಶೀಲಿಸಿ, ಜೈಲು ಶಿಕ್ಷೆಗೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಏಪ್ರಿಲ್ 25 ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್​, ಜುಲೈ 7 ರಂದು ತೀರ್ಪು ಪ್ರಕಟಿಸಿತ್ತು. ರಾಹುಲ್ ಗಾಂಧಿಗೆ ಕೆಳ ನ್ಯಾಯಾಲಯವು ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

Share This Article
Leave a comment