ಸ್ವಂತ ಕಾರು ಇದ್ದವರಿಗೆ BPL ಕಾರ್ಡ್ ರದ್ದು – ಸಚಿವ K.H ಮುನಿಯಪ್ಪ

Team Newsnap
1 Min Read

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ yellow ಬೋರ್ಡ್ ಕಾರು ಹೊಂದಿರುವವರ BPL ಕಾರ್ಡ್ ರದ್ದನ್ನು ವಾಪಸ್ಸು ಪಡೆಯಲು ಚಿಂತನೆ ನಡೆಸಲಾಗುತ್ತಿದೆ. white ಬೋರ್ಡ್ ಕಾರು ಹೊಂದಿರುವ ಕುಟುಂಬದ BPL ಕಾರ್ಡ್ ರದ್ದು ಮಾಡಲಾಗುತ್ತದೆ ಎಂದು ಹೇಳಿದರು.

ದುಡಿಮೆಗಾಗಿ ಕಾರು ಖರೀದಿಸಿದವರ ಕಾರ್ಡ್ ನ್ನು ರದ್ದು ಮಾಡಲಾಗುವುದಿಲ್ಲ. ಸ್ವಂತ ಕಾರು ಯಾರು ಹೊಂದಿರುತ್ತಾರೆ ಅವರಿಗೆ BPLಕಾರ್ಡ್ ಅನ್ನು ರದ್ದು ಮಾಡಲಾಗುವುದು ಎಂದು ಆಹಾರ ಸಚಿವ ಘೋಷಿಸಿದ್ದಾರೆ.

ಸೆಪ್ಟೆಂಬರ್ ನಲ್ಲಿ 10 ಕೆಜಿ ಅಕ್ಕಿ ನೀಡಲು ಚಿಂತನೆ ನಡೆಸಲಾಗುತ್ತಿದ್ದು ಹಣದ ಬದಲು ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ ಹೆಚ್ಚು ದಿನ ಹಣ ನೀಡಲು ಆಗದ ಕಾರಣ ಅಕ್ಕಿ ಜೊತೆ ರಾಗಿ ಜೋಳ ನೀಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಸ್ಪಷ್ಟ ಪಡಿಸಿದರು.

ಹೊಸದಾಗಿ BPL​, APL​ ಕಾರ್ಡ್​ಗೆ ಅರ್ಜಿ ಸಲ್ಲಿಸಬಹುದು. ನೀತಿ ಸಂಹಿತೆ ಜಾರಿಯಾಗಿದ್ದ ಹಿನ್ನೆಲೆ ರೇಷನ್​​ ಕಾರ್ಡ್​ ವಿತರಣೆ ಮಾಡುವುದನ್ನು ಸ್ಥಗಿತ ಮಾಡಲಾಗಿತ್ತು. ಈಗ ಹೊಸ ಪಡಿತರಕಾರ್ಡ್​ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

Share This Article
Leave a comment