ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ: ಭಗವದ್ಗೀತೆಯಲ್ಲಿ ಜೀವನದ ಪಾಠ, ನೈತಿಕತೆ ಇದೆ – ಸಿಂಹ

Team Newsnap
1 Min Read

ಗುಜರಾತ್‍ ಮಾದರಿಯಲ್ಲೇ ರಾಜ್ಯದಲ್ಲೂ ಕೂಡ ಪಠ್ಯಕ್ಕೆ ಭಗವದ್ಗೀತೆ ಸೇರಿಸುವ ಚಚೆ೯ ಆರಂಭವಾದ ಬೆನ್ನಲ್ಲೇ
ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿ ನೀಡಿ ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ ಎಂದು ಹೇಳಿದರು.

ಭಗವದ್ಗೀತೆ ಪಠ್ತಪುಸ್ತಕಗಳಲ್ಲಿ ಸೇರಿಸುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ. ಖುರಾನ್ ಮತ್ತು ಬೈಬಲ್ ಧಾರ್ಮಿಕ ಗ್ರಂಥಗಳು. ಭಗವದ್ಗೀತೆಯಲ್ಲಿ ಜೀವನದ ಪಾಠ ಇದೆ, ನೈತಿಕತೆ ಇದೆ. ಅದು ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಭೋದಿಸುತ್ತದೆ. ಭಗವದ್ಗೀತೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಎಂದು ವಿವರಿಸಿದರು.

ಬೇರೆ ಧರ್ಮಗ್ರಂಥಗಳಂತೆ ಭಗವದ್ಗೀತೆಯನ್ನು ಭಾವಿಸಬೇಡಿ. ಇದನ್ನು ಖಂಡಿತ ಪಠ್ಯದಲ್ಲಿ ಅಳವಡಿಸಲೇಬೇಕು ಎಂದು ಕೇಳಿಕೊಂಡರು.

ಹಿಜಬ್ ವಿಚಾರದಲ್ಲಿ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ, ಧರ್ಮನೇ ಸುಪ್ರೀಂ ಅಂತ ಹೇಳುತ್ತಾರೆ. ದೇಶಕ್ಕಿಂತ ಧರ್ಮನೇ ಮುಖ್ಯ ಎನ್ನುತ್ತಿದ್ದಾರೆ. ಇದು ಹಿಜಬ್ ವಿಷಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಕೋರ್ಟ್ ತೀರ್ಪನ್ನೇ ಧಿಕ್ಕರಿಸಿದ್ದಾರೆ. ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಅವರಿಗೆ ಅಂದೇ ಇದೆಲ್ಲಾ ಗೊತ್ತಾಗಿತ್ತು. ನಮ್ಮ ಜನರಿಗೆ ಈಗ ಅರ್ಥವಾಗಿದೆ ಎಂದು ಬಂದ್‍ಗೆ ಕರೆ ನೀಡಿದವರಿಗೆ ಟಾಂಗ್ ಕೊಟ್ಟರು.

Share This Article
Leave a comment