May 26, 2022

Newsnap Kannada

The World at your finger tips!

pava 1

ಪಾವಗಡ ಬಸ್​​ ದುರಂತ : ಮೃತಪಟ್ಟ 8 ಮಂದಿ ಪೈಕಿ ನಾಲ್ವರು ವಿದ್ಯಾರ್ಥಿಗಳು

Spread the love

ಡ್ರೈವರ್​​ ಅತಿವೇಗದ ಚಾಲನೆಯೇ ಖಾಸಗಿ ಬಸ್​ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ವೈ.ಎಸ್​​ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ತಿರುವಿನಲ್ಲಿ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಏರುತ್ತಲೇ ಇದೆ.

ಈಗ ಪಾವಗಡದಲ್ಲಿ ಖಾಸಗಿ ಬಸ್​ ದುರಂತದಲ್ಲಿ ಮೃತಪಟ್ಟ ನಾಲ್ಕು ಮಂದಿಯ ಗುರುತು ಪತ್ತೆಯಾಗಿದೆ.

ವೈ.ಎನ್ ಹೊಸಕೋಟೆ ಮೂಲದ ಕಲ್ಯಾಣ್ (18), ಅಮೂಲ್ಯ (17), ಅಜಿತ್ (21), ಶಾ ನವಾಜ್ (19) ಮೃತರು ಎನ್ನಲಾಗಿದೆ.
ಇವರೆಲ್ಲೂ ಪಾವಗಡ ಜೂನಿಯರ್ ಕಾಲೇಜ್ ವಿದ್ಯಾರ್ಥಿಗಳು ಎನ್ನಲಾಗಿದೆ.

ಎರಡು ಬಸ್​ ಜನರನ್ನು ಒಂದೇ ಬಸ್ ನಲ್ಲಿ ತುಂಬಿಸಿಕೊಂಡು ಡ್ರೈವರ್​ ಬಸ್​​ ಚಲಾಯಿಸುತ್ತಿದ್ದ.

ಬಸ್​​​​ ಟಾಪ್ ಮೇಲೆ, ಒಳಗೆ ತುಂಬಿ ತುಳುಕುತ್ತಿದ್ದರು ಪ್ರಯಾಣಿಕರು. ಇಷ್ಟೊಂದು ಪ್ರಮಾಣದ ಜನರಿದ್ರೂ ಡ್ರೈವರ್​​​​ ಅತೀ ವೇಗವಾಗಿ ಬಸ್​​ ಚಲಾಯಿಸಿದ್ದಾರೆ.

ಆಗ ಎಸ್​​ಟಿವಿ ಬಸ್​​ ಹೆದ್ದಾರಿಯ ತಿರುವಿನಲ್ಲಿ ದಿಢೀರನೇ ಉರುಳಿ ಬಿದ್ದಿದೆ.

error: Content is protected !!