ಬಸ್ ಹತ್ತುವಾಗ ಬಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ- ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ ಸ್ಥಿತಿ

Team Newsnap
1 Min Read
Bengaluru University student who fell while boarding the bus ಬಸ್ ಹತ್ತುವಾಗ ಬಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ- ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ ಸ್ಥಿತಿ

ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿಯ ಮೇಲೆಯೇ ಅದೇ ಬಸ್ ಹರಿದಿದ್ದು, ಗಂಭೀರ ಗಾಯಗೊಂಡ ಘಟನೆ ಬೆಂಗಳೂರಿನ ಜ್ಞಾನಭಾರತಿ ಯುನಿವರ್ಸಿಟಿ ಬಳಿ ನಡೆದಿದೆ.

ಕೋಲಾರದ ಶಿಲ್ಪಾ ಅಪಘಾತದಲ್ಲಿ ಗಂಭೀರ ಗಾಯಗೊಂಡ ವಿದ್ಯಾರ್ಥಿನಿ. ಈಕೆ ಮೊದಲ ವರ್ಷದ ಪಿಜಿ ವ್ಯಾಸಂಗ ಮಾಡುತ್ತಿದ್ದಾಳೆ. ಶಿಲ್ಪಾ ಬಸ್ ಹತ್ತುತ್ತಿದ್ದಂತೆಯೇ ಚಾಲಕ ಮುಂದಕ್ಕೆ ಮೂವ್ ಮಾಡಿದ್ದಾನೆ.ಇದನ್ನು ಓದಿ –ಮಗಳ ಹೆರಿಗಾಗಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಸುಪ್ರೀಂ ಅನುಮತಿ

ಪರಿಣಾಮ ಕೆಳಗೆ ಬಿದ್ದ ಶಿಲ್ಪಾಳ ಮೇಲೆ ಬಸ್ ಹರಿದು ಗಂಭೀರ ಗಾಯಗೊಂಡಿದ್ದಾಳೆ. ಸದ್ಯ ಗಾಯಗೊಂಡ ಶಿಲ್ಪಾಳನ್ನು ಸ್ಥಳೀಯ ಪೊಲೀಸರು ಹತ್ತಿರದ ಅಸ್ಪತ್ರೆಗೆ ಸೇರಿಸಲಾಗಿದೆ.

ಅಪಘಾತ ಪ್ರಕರಣ ಸಂಬಂಧಿಸಿದಂತೆ ಯೂನಿವರ್ಸಿಟಿ ಒಳಗೆ ವಾಹನ ಬಿಡದಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಯೂನಿವರ್ಸಿಟಿಯ ಎಲ್ಲಾ ಗೇಟ್ ಗಳನ್ನು ಬೀಗ ಹಾಕಿ ಧರಣಿ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್ ಆರ್ ಪಿ ವಾಹನ ಆಗಮಿಸಿದೆ.

ಸ್ಥಳಕ್ಕಾಗಮಿಸಿದ ಬಿಎಂಟಿಸಿ ಪಶ್ಚಿಮ ವಲಯದ ಡಿಸಿ ಶ್ರೀನಾಥ್, ಯುವತಿಯ ಚಿಕಿತ್ಸಾ ವೆಚ್ಚ ಭರಿಸೋದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಯುವತಿಯನ್ನು ಈಗ ಪೋರ್ಟಿಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೂರ್ನಾಲ್ಕು ಸರ್ಜರಿ ಮಾಡಬೇಕು ಅಂತ ಹೇಳಿದ್ದಾರೆ. ಎಲ್ಲಾ ಚಿಕಿತ್ಸಾ ವೆಚ್ಚ ಭರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಬಿಬಿಎಂಪಿ, ಅರಣ್ಯ, ಪೊಲೀಸ್ ಇಲಾಖೆ, ವಿದ್ಯಾರ್ಥಿಗಳ ಸೇರಿ ಸಮಿತಿ ರಚನೆ ಮಾಡಲಾಗುವುದು. ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ಮಾಡಲಾಗುವುದು. ತಕ್ಷಣಕ್ಕೆ ಸಭೆ ಕರೆದು ಸಾರ್ವಜನಿಕ ವಾಹನ ನಿಷಿದ್ಧದ ಬಗ್ಗೆ ತೀರ್ಮಾನ ಮಾಡಲಾಗುವುದು.

ಬಿಎಂಟಿಸಿ ವತಿಯಿಂದ ವಿದ್ಯಾರ್ಥಿನಿ ಚಿಕಿತ್ಸೆ ವೆಚ್ಚ ನೀಡಲಾಗುವುದು. ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಹೆಸರಲ್ಲಿ 5 ಲಕ್ಷ ಫಿಕ್ಸ್ ಡ್ ಠೇವಣಿ ಇಡಲು ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತರು ಹೇಳಿದ್ದಾರೆ.

Share This Article
Leave a comment