ಮಗಳ ಹೆರಿಗೆ ಹಿನ್ನೆಲೆ ಬಳ್ಳಾರಿಗೆ ತೆರಳಲು ಅನುಮತಿ ಕೋರಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಒಂದು ತಿಂಗಳ ಕಾಲಾವಕಾಶ ನೀಡಿದೆ.
ಈ ಬಗ್ಗೆ ಇಂದು ತೀರ್ಪು ನೀಡಿದ ನ್ಯಾ. ಎಂ.ಆರ್.ಶಾ ಅವರ ಪೀಠ, ನವೆಂಬರ್ 6 ರ ವರೆಗೆ ಭೇಟಿ ನೀಡಲು ಮತ್ತು ವಾಸ್ತವ್ಯ ಹೂಡಲು ಅನುಮತಿ ನೀಡಿದೆ.ಇದನ್ನು ಓದಿ –ಡಿಕೆಶಿ ಕೈಹಿಡಿದು ಪಾದಯಾತ್ರೆಯಲ್ಲಿ ಓಡಿದ ರಾಹುಲ್ : ಕಾಲು ಉಳುಕಿಸಿಕೊಂಡ ನಾಯಕ
ಮಗಳ 2ನೇ ಹೆರಿಗೆ ಹಿನ್ನೆಲೆ 2 ತಿಂಗಳ ಕಾಲ ಮಗಳ ಜೊತೆಗೆ ಇರಬೇಕಿದೆ. ಇದಕ್ಕಾಗಿ ಬಳ್ಳಾರಿಗೆ ತೆರಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಅನುಮತಿ ನೀಡಲು ಸಿಬಿಐ ವಿರೋಧ ವ್ಯಕ್ತಪಡಿಸಿತ್ತು. 2 ತಿಂಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿದ್ದರೆ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.
ಸಿಬಿಐ ಆಕ್ಷೇಪದ ಬಳಿಕ ಕನಿಷ್ಠ 1 ತಿಂಗಳ ಕಾಲವಾದರೂ ಅನುಮತಿ ನೀಡಬೇಕು ಮತ್ತು ನನ್ನ ಮೇಲೆ ಪೊಲೀಸ್ ನಿಗಾ ಇಡಬಹುದು ಎಂದು ಜನಾರ್ದನ ರೆಡ್ಡಿ ಪರ ವಕೀಲರುಕೇಳಿಕೊಂಡಿದ್ದರು. ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಈ ಆದೇಶವನ್ನು ಇಂದು ಪ್ರಕಟಿಸಿದೆ.
ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪ್ರತಿನಿತ್ಯ ವಿಚಾರಣೆಯನ್ನು ನಡೆಸುವಂತೆ ಮತ್ತು ನವೆಂಬರ್ 9 ರಿಂದ 6 ತಿಂಗಳಲ್ಲಿ ಸಂಪೂರ್ಣ ವಿಚಾರಣೆ ಪೂರ್ಣಗೊಳಿಸಲು ಕೇಳಿ ಹಂತದ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಈ ಹಿಂದೆ ಬಳ್ಳಾರಿ ತೆರಳಲು ನಿರ್ಬಂಧಿಸಿತ್ತು.
- ಜುಲೈ ವೇಳೆಗೆ ಧಾರವಾಡ – ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭ – ಜೋಶಿ
- ನಮ್ಮ ಮೆಟ್ರೋ ಲಿಖಿತ ಪರೀಕ್ಷೆ ಮುಂದೂಡಿಕೆ
- ನನ್ನ ವಿರುದ್ಧದ ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುವೆ : ಬ್ರಿಜ್ ಭೂಷಣ್
- ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಯಾವುದೇ ಚರ್ಚೆ ಇಲ್ಲ : ಜಗದೀಶ್ ಶೆಟ್ಟರ್
- ಲೋಕಾಯುಕ್ತ ದಾಳಿ- ಜಿಂಕೆ ಕೊಂಬು ಸೇರಿ 4.75 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ
- ಜೆಡಿಎಸ್ ವಿಸರ್ಜನೆ ಪ್ರಶ್ನೆಗೆ ಎಚ್ಡಿಕೆ ಕಡಕ್ ಉತ್ತರ
More Stories
ಜುಲೈ ವೇಳೆಗೆ ಧಾರವಾಡ – ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭ – ಜೋಶಿ
ನಮ್ಮ ಮೆಟ್ರೋ ಲಿಖಿತ ಪರೀಕ್ಷೆ ಮುಂದೂಡಿಕೆ
ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಯಾವುದೇ ಚರ್ಚೆ ಇಲ್ಲ : ಜಗದೀಶ್ ಶೆಟ್ಟರ್