ಗಣಂಗೂರು ಟೋಲ್ ಜುಲೈ 1 ರಿಂದ ಆರಂಭವಾಗಿದ್ದು , ಬಸ್‌ಗಳ ಏಕಮುಖ ಸಂಚಾರಕ್ಕೆ 525 ರೂ. ಟೋಲ್ ಸಂಗ್ರಹಿಸಲಾಗುಲಾಗಿತ್ತು.
ಇದನ್ನ ಸರಿದೂಗಿಸಲು ಕೆಎಸ್‌ಆರ್‌ಟಿಸಿ ಈ ಮಾರ್ಗದಲ್ಲಿ ಸಾಮಾನ್ಯ ಸಾರಿಗೆಗೆ 15 ರೂ., ರಾಜಹಂಸಕ್ಕೆ 20 ರೂ., ವೋಲ್ವೋ ಮತ್ತು ಎಲೆಕ್ಟ್ರಿಕ್ ಬಸ್‌ಗಳ ಟಿಕೆಟ್ ದರವನ್ನು 30 ರೂ.ಗಳಷ್ಟು ಹೆಚ್ಚಿಸಿದೆ.
ಸಾಮಾನ್ಯ ಸಾರಿಗೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ 170 ರೂ. ಇತ್ತು, ಈಗ 185 ರೂ. ಆಗಿದೆ. ರಾಜಹಂಸ 230 ರಿಂದ 250 ರೂ.ಗೆ ಏರಿಕೆಯಾಗಿದೆ. ವೋಲ್ವೋ ಅಥವಾ ಇವಿ ಬಸ್‌ಗಳಲ್ಲಿ 330 ರಿಂದ 360 ರೂ.ಗೆ ಟಿಕೆಟ್ ದರ ಹೆಚ್ಚಳವಾಗಿದೆ.
ಬೆಂಗಳೂರು ಬಳಿಯ ಕಣಮಿಣಕಿ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿಯ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಶುರುವಾದಾಗ, ಬಸ್ ಟಿಕೆಟ್ ದರವನ್ನ 20 ರಿಂದ 35 ರೂ.ಗೆ ಹೆಚ್ಚಿಸಲಾಗಿತ್ತು.ಕರ್ನಾಟಕದ ರೈಲ್ವೆ ಇಲಾಖೆಯಲ್ಲಿ 904 ಹುದ್ದೆಗಳಿಗೆ ಅರ್ಜಿ ಆಹ್ವಾನ
ಈದೀಗ ಮತ್ತೆ ಬಸ್ ಟಿಕೆಟ್ ದರ ಏರಿಕೆ ಆಗಿರುವುದು ಸಾರಿಗೆ ಸವಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು