January 9, 2025

Newsnap Kannada

The World at your finger tips!

bell bottom

ಬೆಲ್ ಬಾಟಂ ಭಾಗ ಎರಡು; ಮತ್ತೊಂದು ತನಿಖೆಗೆ ದಿವಾಕರ ರೆಡಿ

Spread the love

2019ರಲ್ಲಿ ಬಿಡುಗಡೆಯಾಗಿದ್ದ ಬೆಲ್ ಬಾಟಂ ಚಲನಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆದಿತ್ತು. 125 ದಿನಗಳ ಯಶಸ್ವಿ ಪ್ರಯೋಗ ಕಂಡಿದ್ದ ಈ ಚಿತ್ರ ಇದೀಗ ಭಾಗ 2ರಲ್ಲಿ ತಯಾರಾಗಿ ಬರಲು ಸಕಲ ಸಿದ್ಧತೆ ನಡೆಸಿದೆ.

ಕಳೆದ ವರ್ಷದ ಕೊನೆಯಿಂದ ಬೆಲ್ ಬಾಟಂನ ಮುಂದುವರಿದ ಭಾಗ ಬರುತ್ತದೆ ಎಂದು ಹೇಳಲಾಗುತ್ತಿತ್ತು. 2019ರ ಅಂತ್ಯದಲ್ಲಿ ಚಿತ್ರತಂಡವೂ ಸಹ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿತ್ತು. ನಿರ್ದೇಶಕ ಜಯತೀರ್ಥ ಸಹ ಸಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ಕ್ರಿಪ್ಟ್ ಡಿಸ್ಕಷನ್ ನಡೆಸುತ್ತಿರುವ ಚಿತ್ರವೊಂದನ್ನು ಚಿತ್ರತಂಡ ಹಂಚಿಕೊಂಡಿತ್ತು.

ಬೆಲ್ ಬಾಟಂ ಭಾಗ-2 ಚಿತ್ರದ ಮುಹೂರ್ತವನ್ನು ಜನವರಿ 29ಕ್ಕೆ ಚಿತ್ರತಂಡ ಹಮ್ಮಿಕೊಂಡಿದೆ. ವಿಶೇಷವೆಂದರೆ ಬೆಲ್ ಬಾಟಂ ಮೊದಲ ಭಾಗದ ಚಿತ್ರದ ಮುಹೂರ್ತವೂ ಸಹ ಜನವ್ರಿ 29ರಂದು ಆಗಿತ್ತು. ಅಲ್ಲದೇ ಚಿತ್ರತಂಡ ಬೆಲ್ ಬಾಟಂ ಚಿತ್ರದ ಮೊದಲ ಭಾಗವನ್ನು ಬಿಡುಗಡೆ ಮಾಡಿದ್ದ ದಿನಾಂಕದಂದೇ ಬೆಲ್ ಬಾಟಂನ ಮುಂದುವರೆದ ಭಾಗವನ್ನು ಬಿಡುಗಡೆ ಮಾಡಲು ಯೋಚಿಸುತ್ತಿದೆ.

ಇನ್ನು ಪಾತ್ರವರ್ಗದ ಬಗ್ಗೆ ಹೇಳುವದಾದರೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಎರಡನೇ ಭಾಗದಲ್ಲಿ ಮುಂದುವರೆಯಲಿವೆ. ಕುಸುಮ, ಅಣ್ಣಪ್ಪ, ಸಗಣಿ ಪಿಂಟೋ ಎಲ್ಲವೂ ಮುಂದುವರೆಯಲಿವೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಹೆಚ್ಚು ಕುತೂಹಲವನ್ನು ಕೆರಳಿಸಲಿದೆ ಎಂದು ಚಿತ್ರತಂಡ ಹೇಳಿದೆ.

Copyright © All rights reserved Newsnap | Newsever by AF themes.
error: Content is protected !!