ಅರುಣಾಚಲದ ಗಡಿಯಲ್ಲಿ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಮುಂದಾದ ಚೀನಾ

Team Newsnap
1 Min Read

ಮೊದಲಿನಿಂದಲೂ ಅರುಣಾಚಲ ಪ್ರದೇಶ ತನ್ನದು ಎಂದು ವಿವಾದ ಸೃಷ್ಠಿಸುತ್ತಿರುವ ಚೀನಾ ಈಗ ಅರುಣಾಚಲ-ಟಿಬೇಟ್ ಗಡಿಯಲ್ಲಿರುವ ಲಿಂಝಿ ಪ್ರದೇಶದಲ್ಲಿ ಚೀನಾ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ.

ಚೀನಾದ ಸಿಚುವಾನ್ ಹಾಗೂ ಟಿಬೇಟ್ ನಡುವಿನ ರೈಲು ಮಾರ್ಗಕ್ಕೆ 3.5 ಲಕ್ಷ ಕೋಟಿ ವೆಚ್ಛದಲ್ಲಿ‌ ಚೀನಾ ಯೋಜನೆ ರೂಪಿಸಿದೆ. ಈ ಯೋಜನೆ ಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಚೀನಾದ ಅಧ್ಯಕ್ಷ ಕ್ಸಿ‌ ಜಿನ್‌ಪಿಂಗ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಕಿಂಘ್ವಾಯ್-ಟಿಬೇಟ್ ನಡುವೆ ಒಂದು ರೈಲು ಮಾರ್ಗ ಇದೆ. ಈಗ ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡ ಲಿಂಝಿ (ನಿಂಗ್ಚಿ) ಪ್ರದೇಶದಲ್ಲಿ‌ ರೈಲು ಮಾರ್ಗ ನಿರ್ಮಾಣವು, ಯುದ್ಧ ಸಮಯದಲ್ಲಿ ಚೀನಾವು ತನ್ನ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಇದು ಒಳ್ಳೆಯ ಅವಕಾಶವಾಗುವದರಿಂದ ಭಾರತಕ್ಕೆ ಚೀನಾದ ಈ ನಡೆ ಚಿಂತೆ ಹುಟ್ಟಿಸಿದೆ.

Share This Article
Leave a comment