ವಿದ್ಯುತ್ ದರ ಏರಿಕೆ – ಜನ ಸಾಮಾನ್ಯರಿಗೆ ಹೊರೆ, ಬರೆ ಚಲುವರಾಯಸ್ವಾಮಿ ಖಂಡನೆ

Team Newsnap
1 Min Read

ರಾಜ್ಯ ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಿ ಜನ‌ ಸಾಮಾನ್ಯರಿಗೆ ಬರೆ ಎಳೆದಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎನ್ ಚಲುವರಾಯಸ್ವಾಮಿ ಸೋಮವಾರ ಖಂಡಿಸಿದ್ದಾರೆ.

ಈ ಕುರಿತಂತೆ ನೀಡಿರುವ ಹೇಳಿಕೆಯಲ್ಲಿ ವಿದ್ಯುತ್ ದರ ದಿಢೀರ್ ಏರಿಕೆಯಿಂದ ಜನ ಸಾಮಾನ್ಯ ರಿಗೆ ಹಾಗೂ ರೈತರಿಗೆ ತೀವ್ರ ಹೊರೆಯಾಗಿದೆ. ಕೊರೋನಾ ಆರ್ಥಿಕ ಸಂಕಷ್ಟ ದಿಂದ ಜನರು ಹೊರ ಬರಲು ಇನ್ನೂ ಸಾಧ್ಯವಾಗಿಲ್ಲ. ಈ ಸಮಯದಲ್ಲಿ ವಿದ್ಯುತ್ ದರ ಏರಿಕೆಯ ಅನಿವಾರ್ಯತೆ ಏನಿತ್ತು ಎಂದು ಚಲುವರಾಯಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ವಿದ್ಯುತ್ ನಿಗಮದ ಆರ್ಥಿಕ ಹೊರೆ, ಅಗತ್ಯತೆಗಳನ್ನು ರಾಜ್ಯ ಸರ್ಕಾರವೇ ಭರಿಸಬೇಕಿತ್ತು. ಜನರಿಗೆ ಆರ್ಥಿಕ ಸಂಕಷ್ಟ ವೇಳೆಯಲ್ಲಿ ವಿದ್ಯುತ್ ದರ ಏರಿಸುವ ಅಗತ್ಯವಿಲ್ಲ. ತಕ್ಷಣವೇ ದರ ಏರಿಕೆ ಕೈ ಬಿಡದಿದ್ದರೆ ಕಾಂಗ್ರೆಸ್ ಪಕ್ಷವು ಜನರ ಪರವಾಗಿ ಹೋರಾಟ ನಡೆಸಲಿದೆ ಎಂದು ಚಲುವರಾಯಸ್ವಾಮಿ ಎಚ್ಚರಿಸಿದ್ದಾರೆ.

ರೈತ ಕುಟುಂಬಕ್ಕೆ ಸಾಂತ್ವಾನ

ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಕೆ ಆರ್ ಪೇಟೆ ತಾಲೂಕಿನ ಚೊಟ್ಟನಹಳ್ಳಿ ರೈತ ನಂಜೇಗೌಡರ ಕುಟುಂಬಕ್ಕೆ ಚಲುವರಾಯಸ್ವಾಮಿ ಸಾಂತ್ವಾನ ಹೇಳಿದ್ದಾರೆ

ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿರುವುದರಿಂದ ಆ ಗ್ರಾಮಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸರಿ ಹೋದ ತಕ್ಷಣ ಆ ಗ್ರಾಮಕ್ಕೆ ಹೋಗಿ ಕುಟುಂಬದವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.

ರಾಜ್ಯದ ಯಾವುದೇ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡದಂತೆ ಮನವಿ ಮಾಡಿದ್ದಾರೆ.

Share This Article
Leave a comment