BDA ಬ್ರೋಕರ್ ಮೋಹನ್ ಮನೆಯಲ್ಲಿ 5 KG ಚಿನ್ನ ಪತ್ತೆ – ದಂಗಾಗಿರುವ ACB ಅಧಿಕಾರಿಗಳು

Team Newsnap
1 Min Read

ಮಂಗಳವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬಿಡಿ ಬ್ರೋಕರ್ ಮೋಹನ್
ಎಂಬವರಮನೆಯಲ್ಲಿ 5 ಕೆಜಿ ಚಿನ್ನ, ಬೆಳ್ಳಿ ತಟ್ಟೆ, ಲೋಟ, ದೀಪದ ಕಂಬಗಳು ಪತ್ತೆಯಾಗಿದೆ.

ಈಗಲೂ ಶೋಧನಾ ಕಾರ್ಯ ಮುಂದುವರಿದಿದೆ, ಇದರೊಂದಿಗೆ ಅಧಿಕಾರಿಗಳು ಚಿನ್ನ – ಬೆಳ್ಳಿ ಖರೀದಿಸಿದ ಮೂಲ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

acb 12

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಸರ್ಕಾರದಿಂದ ಯಾವುದೇ ಯೋಜನೆ ಪಡೆಯಬೇಕೆಂದರೂ ಮಧ್ಯವರ್ತಿಗಳ ಮೂಲಕವೇ ಹೋಗಬೇಕಿದೆ.

ತಾನು ಯೋಜನೆಯ ಪ್ರಯೋಜನ ಪಡೆಯಬೇಕಾದರೆ, ಇಷ್ಟು ಕಮಿಷನ್ ಕೊಡಬೇಕು ಎಂದು ಮಧ್ಯವರ್ತಿಯೇ ನಿಗದಿ ಮಾಡುತ್ತಾರೆ. ಒಮ್ಮೆ ಅವರು ಕಮಿಷನ್ ಪಡೆದು ಒಪ್ಪಿಗೆ ಕೊಟ್ಟರೆ, ಅಲ್ಲಿಗೆ ಆ ಕೆಲಸ ಮುಗಿಯಿತು ಎಂದೇ ಅರ್ಥ.

ಈ ರೀತಿಯಲ್ಲಿ ಕಮಿಷನ್ ಪಡೆಯುತ್ತಿರುವ ಮಧ್ಯವರ್ತಿಗಳು ಅಧಿಕಾರಿಗಳ ಸರಿಸಮನಾಗಿ ಆಸ್ತಿ ಮಾಡುತ್ತಿರುವುದು ಆಗಾಗ್ಗೆ ಬೆಳಕಿಗೆ ಬರುತ್ತಿದೆ.

ಮಂಗಳವಾರ ಬಿಡಿಎ ಕಚೇರಿಯ ಮಧ್ಯವರ್ತಿ ಮೋಹನ್ ಎಂಬವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳು ಪತ್ತೆಯಾಗಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ಬಿಡಿಎ ಅಧ್ಯಕ್ಷ ವಿಶ್ವನಾಥ್ ಸರ್ಕಾರಿ ಯೋಜನೆ ದಾಖಲೆಗಳೆಲ್ಲವೂ ಮಧ್ಯವರ್ತಿಗಳ ಮನೆಯಲ್ಲಿವೆ ಎಂದು, ಖುದ್ದು ಮೋಹನ್ ವಿರುದ್ಧ ಆರೋಪ ಮಾಡಿದ್ದರು.

ಈ ಸಂಬಂಧ ವಿಶ್ವನಾಥ್ ಹಾಗೂ ಹಿಂದಿನ ಬಿಡಿಎ ಆಯುಕ್ತ ಮಹದೇವ್ ಹಾಗೂ ಬ್ರೋಕರ್ ಮೋಹನ್ ಮಧ್ಯೆ ದೊಡ್ಡ ಮಟ್ಟದ ಗಲಾಟೆ ನಡೆದಿತ್ತು. ಆದರೂ ಬಿಡಿಎನಲ್ಲಿ ಗಟ್ಟಿ ನೆಲೆಯೂರಿದ್ದ ಮೋಹನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇತ್ತೀಚೆಗೆ ಅರ್ಕಾವತಿ ವಿಚಾರದಲ್ಲೂ ಮೋಹನ್ ಕೈಚಳಕ ಎಂಬ ಸಂಶಯ ಈಗಲೂ ಇದೆ

Share This Article
Leave a comment