ಗೃಹ ಬಳಕೆ LPG ಬೆಲೆ 50 ರು ಹೆಚ್ಚಳ – ಪೆಟ್ರೋಲ್ , ಡಿಸೇಲ್ ಬೆಲೆಯೂ ಏರಿಕೆ – ಗ್ರಾಹಕರಿಗೆ ಶಾಕ್

Team Newsnap
1 Min Read

ರಷ್ಯಾ ಉಕ್ರೇನ್‌ ಯುದ್ಧ ಈಗ ಜನರ ಮೇಲೆ ನೇರ ಪರಿಣಾಮದಿಂದಾಗಿ ಗೃಹ ಬಳಕೆಯ ಸಿಲಿಂಡರ್‌ ದರ 50 ರು ದರ ಕಳೆದ ಮಧ್ಯರಾತ್ರಿಯಿಂದಲೇ ಏರಿಕೆಯಾಗಿದೆ.

2021ರ ಅಕ್ಟೋಬರ್‌ 6 ರ ಬಳಿಕ ಮೊದಲ ಬಾರಿಗೆ ದರ ಏರಿಕೆಯಾಗಿದೆ.

14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಮಾ.22ರ ಮಧ್ಯರಾತ್ರಿಯಿಂದಲೇ ಏರಿದೆ.

ಬೆಂಗಳೂರಿನಲ್ಲಿ ಈ ಮೊದಲು 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 902.50 ರೂ. ಇದ್ದರೆ ಈಗ ಬೆಲೆ 952.50 ರೂ.ಗೆ ಏರಿಕೆಯಾಗಿದೆ.

ಮುಂಬೈ – 949.50 ರು ಕೋಲ್ಕತ್ತಾ – 965.50 ರು
ಲಕ್ನೋ – 987.50 ರುಪಾಟ್ನಾ – 1039.50 ರು

101 ರು ಗಳ ಗಡಿ ದಾಟಿದ ಪೆಟ್ರೋಲ್ : ಡಿಸೇಲ್ ಬೆಲೆಯೂ ಹೆಚ್ಚಳ

137 ದಿನಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದೆ.

ಮಾರ್ಚ್‌ 22ರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ 80 ಪೈಸೆ ಹೆಚ್ಚಳವಾಗಿದೆ.

ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‍ಗೆ 101.42 ಮತ್ತು ಡೀಸೆಲ್‍ಗೆ 85.80 ತಲುಪಿದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.21, ಪ್ರತಿ ಲೀಟರ್ ಡೀಸೆಲ್‍ಗೆ 87.47,

ಮುಂಬೈನಲ್ಲಿ ಲೀಟರ್ ಪೆಟ್ರೋಲ್ 110.78, ಡೀಸೆಲ್ 94.94,

ಕೋಲ್ಕತ್ತಾದಲ್ಲಿ ಪೆಟ್ರೋಲ್ 102.16 ಮತ್ತು ಡೀಸೆಲ್ 90.62,

ಚೆನ್ನೈನಲ್ಲಿ ಪೆಟ್ರೋಲ್ ದರ 102.16, ಡೀಸೆಲ್ ದರ 92.19 ರೂಪಾಯಿಗೆ ಏರಿಕೆಯಾಗಿದೆ.

Share This Article
Leave a comment