ಬಸವಣ್ಣನವರ ಕಳಬೇಡ, ಕೊಲಬೇಡ ವಚನವು ಜೀವನದ ಸಂವಿಧಾನವಾಗಿದೆ. ಇದು ಎಲ್ಲಾ ಧರ್ಮಗಳೂ ಅಂಗೀಕರಿಸಬೇಕಾದ ಸಪ್ತಸೂತ್ರ ಎಂದು ಗಡಿಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ “ಮಾದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ’ ಹಾಗೂ “ನಡೆದಾಡಿದ ದೇವರು’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಆಫ್ಘಾನಿಸ್ತಾನದಲ್ಲಿ ಈಗ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ವಚನ ಹೆಚ್ಚು ಪ್ರಸ್ತುತ ಎಂದು ಹೇಳಿದರು.
೧೫-೧೬ನೇ ಶತಮಾನದಲ್ಲಿ ರಾಕ್ಷಸರ ಹಾವಳಿ ಇದ್ದಾಗ ಅವರನ್ನು ಸಂಹಾರ ಮಾಡಿದವರು ಮಹದೇಶ್ವರರು. ಬುಡಕಟ್ಟು ಜನಾಂಗದ ನೋವು-ನಲಿವುಗಳನ್ನು ಮಹದೇಶ್ವರರಲ್ಲಿ ಕಾಣಬಹುದು ಎಂದರು. ಸಿದ್ಧಗಂಗಾಮಠವು ಆಧುನಿಕ ಅನುಭವ ಮಂಟಪ. ಮಾತೃ ಹೃದಯಿಯಾಗಿದ್ದವರು ಶ್ರೀ ಶಿವಕುಮಾರ ಸ್ವಾಮೀಜಿ ಎಂದು ಬಣ್ಣಿಸಿದರು.
ಕೃತಿಗಳ ಕುರಿತು ವಿಶ್ರಾಂತ ಪ್ರಾಧ್ಯಾಪಕಿ ಸಿ.ಜಿ. ಉಷಾದೇವಿ ಮಾತನಾಡಿದರು.
ಪ್ರಾಚ್ಯವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಡಾ. ಎಸ್. ಶಿವರಾಜಪ್ಪ ಅವರು ಈ ಎರಡು ಕೃತಿಗಳನ್ನು ರಚಿಸಿದ್ದಾರೆ.
More Stories
ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಸಂಚಾರ: ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೂಚನೆ
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ