May 26, 2022

Newsnap Kannada

The World at your finger tips!

guntappa

ಡ್ರ್ಯಾಗನ್‍ನಿಂದ ಚುಚ್ಚಿ ರಾಮನಗರದ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

Spread the love

ಹೊಟ್ಟೆ ಹಾಗೂ ತಲೆಗೆ ಡ್ರ್ಯಾಗನ್‍ನಿಂದ ಚುಚ್ಚಿ ಕಾಂಗ್ರೆಸ್ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಮನಗರದಲ್ಲಿ ಕಳೆದ ರಾತ್ರಿ ಜರುಗಿದೆ.

ಕೊಲೆಯಾದ ಗಂಟಪ್ಪ ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ಬಾನಂದೂರು ಗ್ರಾಮದ ನಿವಾಸಿ.

ಇವರನ್ನು ಭೈರವನದೊಡ್ಡಿ ಸಮೀಪ ಇರುವ ಅವರದ್ದೇ ತೋಟದ ಬೈಕ್ ಸರ್ವಿಸ್ ಸ್ಟೇಷನ್ ಮನೆಯಲ್ಲಿ ಕೊಲೆ ಮಾಡಲಾಗಿದೆ.

ಈ ಘಟನೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

ಕೊಲೆಯಾದ ಗಂಟಪ್ಪ ಅವರ ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜಮೀನು ವಿವಾದಕ್ಕೆ ಕೊಲೆ ಮಾಡಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ.
ಬಿಡದಿ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

error: Content is protected !!