5 ಸಾವಿರ ಕೋಟಿ ರು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದ ನಿಲ್ದಾಣದ ಟರ್ಮಿನಲ್ -2 ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಲಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆ ಇಳಿಸಲು ಹೊಸ ಟರ್ಮಿನಲ್ ನಿರ್ಮಾಣ ಮಾಡಿದ್ದು, ಪ್ರಸ್ತುತ 2.5 ಕೋಟಿಯಿಂದ ವಾರ್ಷಿಕವಾಗಿ ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗಲಿದೆ.ಶಂಕರ್‌ನಾಗ್ ಸವಿನೆನಪು
ಟರ್ಮಿನಲ್ 2 ಉದ್ಘಾಟನೆಯಿಂದ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಮತ್ತು ಚೆಕ್-ಇನ್ ದ್ವಿಗುಣಗೊಳ್ಳುತ್ತವೆ ಇದು ಪ್ರಯಾಣಿಕರಿಗೆ ಸಹಾಯವಾಗಲಿದೆ.
ಟರ್ಮಿನಲ್ 2 ಅನ್ನು ಉದ್ಯಾನ ನಗರಿ ಬೆಂಗಳೂರಿನ ಗೌರವಾರ್ಥವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರ ಅನುಭವವನ್ನು ಉದ್ಯಾನವನದಲ್ಲಿ ನಡಿಗೆ ಎಂದು ಅರ್ಥೈಸಲಾಗಿದೆ. ಪ್ರಯಾಣಿಕರು 10,000 ಚದರ ಮೀಟರ್ ಗಳಷ್ಟು ಹಸಿರು ಗೋಡೆಗಳು, ನೇತಾಡುವ ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಸುತ್ತಾರೆ.
ಈ ಉದ್ಯಾನಗಳನ್ನು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತ (India) ದಲ್ಲಿ ನಿರ್ಮಿಸಿದೆ. ಈ ವಿಮಾನ ನಿಲ್ದಾಣವು ನವೀಕರಿಸಬಹುದಾದ ಶಕ್ತಿಯ ಶೇ 100 ರಷ್ಟು ಮಾಡಿಕೊಂಡಿದೆ. ಹೊಸ ಟರ್ಮಿನಲ್ ಫೋಟೋಗಳು ಬಿಡುಗಡೆಯಾಗಿವೆ.
- ಮತ್ತೆ ಟೋಲ್ ಶುಲ್ಕ ಹೆಚ್ಚಳ, ಏಪ್ರಿಲ್ 1 ರಿಂದಲೇ ಹೊಸ ದರ
- ಕೌಟುಂಬಿಕ ಕಲಹ : ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಆತ್ಮಹತ್ಯೆ
- ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಚುನಾವಣೆಯಿಂದ 6 ವರ್ಷ ಅನರ್ಹ
- ಸಂಸತ್ ಸದಸ್ಯತ್ವಕ್ಕೆ ಪ್ರಜ್ವಲ್ ರೇವಣ್ಣರಾಜೀನಾಮೆ ? ದೇವೇಗೌಡರಿಗೆ ತಲೆ ನೋವಾದ ಹಾಸನ ಟಿಕೆಟ್
- ಕೇಂದ್ರದಲ್ಲಿನ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಖಾಲಿ ಹುದ್ದೆಗಳು
- SSLC ವಿದ್ಯಾರ್ಥಿಗಳಿಗೆ ಈ ಬಾರಿಯೂ ಶೇ.10 ರಷ್ಟು ಕೃಪಾಂಕ
More Stories
ಮತ್ತೆ ಟೋಲ್ ಶುಲ್ಕ ಹೆಚ್ಚಳ, ಏಪ್ರಿಲ್ 1 ರಿಂದಲೇ ಹೊಸ ದರ
ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಚುನಾವಣೆಯಿಂದ 6 ವರ್ಷ ಅನರ್ಹ
ಸಂಸತ್ ಸದಸ್ಯತ್ವಕ್ಕೆ ಪ್ರಜ್ವಲ್ ರೇವಣ್ಣರಾಜೀನಾಮೆ ? ದೇವೇಗೌಡರಿಗೆ ತಲೆ ನೋವಾದ ಹಾಸನ ಟಿಕೆಟ್