ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕಾ ಅಲಿಯಾಸ್ ಚಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ. ರಜೆಯಲ್ಲಿ ತುಮಕೂರಿನಲ್ಲಿರುವ ಅಜ್ಜಿಯ ಮನೆಗೆ ಬರುತ್ತಿದ್ದಳು. ಈ ಸಂದರ್ಭದಲ್ಲಿ ಕಣ್ಣೂರು ಮೃತ್ಯಂಜಯ ಶ್ರೀಗಳ ಸಂಪರ್ಕಕ್ಕೆ ಯುವತಿ ಬಂದಿದ್ದಾಳೆ.ಮನೆಯಲ್ಲಿ ಭಗತ್ ಸಿಂಗ್ ಪಾತ್ರದ ಅಭ್ಯಾಸ – ನೇಣಿಗೆ ಕೊರಳು, ಬಾಲಕ ಸಾವು – ಚಿತ್ರದುರ್ಗದಲ್ಲಿ ದುರಂತ
ಈಕೆ ತಾನು ಹೇಳಿದಂತೆ ಕೇಳುತ್ತಾಳೆ ಎನ್ನುವುದು ತಿಳಿಯುತ್ತಿದ್ದಂತೆ ಬಂಡೇ ಮಠದ ಸ್ವಾಮಿಯನ್ನು ಸಿಕ್ಕಿ ಹಾಕಿಸಲು ಕಣ್ಣೂರು ತಂತ್ರ ಹೂಡಿದ್ದಾರೆ. ಇದಾದ ಬಳಿಕ ಯುವತಿ ಬಂಡೇ ಮಠದ ಸ್ವಾಮಿಗಳ ಪರಿಚಯ ಮಾಡಿಕೊಂಡಿದ್ದಾಳೆ.
ಸಲುಗೆ ಜಾಸ್ತಿ ಆಗುತ್ತಿದ್ದಂತೆ ಬಂಡೇ ಮಠದ ಸ್ವಾಮಿಯನ್ನು ತನ್ನ ತಾಳಕ್ಕೆ ತಕ್ಕಂತೆ ನೀಲಾಂಬಿಕಾ ಕುಣಿಸಿದ್ದಾಳೆ. ವೀಡಿಯೋ ಚಾಟ್ ಆರಂಭಿಸಿದ್ದು ಅಲ್ಲದೇ ಚಾಟಿಂಗ್ ವೇಳೆ ನಗ್ನವಾಗುವಂತೆ ಹೇಳಿದ್ದಾಳೆ. ಆಕೆಯ ವೈಯ್ಯಾರದ ಮಾತಿಗೆ ಮರುಳಾದ ಸ್ವಾಮಿನಗ್ನವಾಗಿದ್ದಾರೆ. ಈ ಸಂದರ್ಭದಲ್ಲಿ ವೀಡಿಯೋ ಕರೆಗಳನ್ನು ಆಕೆ ರೆಕಾರ್ಡ್ ಮಾಡುತ್ತಿದ್ದಳು.
ಆ ವೀಡಿಯೋ ಚಾಟಿಂಗ್ ರೆಕಾರ್ಡ್ ಅನ್ನು ಯುವತಿ ಮಹಾದೇವಯ್ಯನಿಗೆ ನೀಡುತ್ತಾಳೆ. ಮಹಾದೇವಯ್ಯ ಆ ವೀಡಿಯೋವನ್ನು ಸಿಡಿ ಮಾಡಿ ಮುಖಂಡರಿಗೆ ಹಂಚಿದ್ದ ವಿಚಾರ ಈಗ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
More Stories
ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳ ನಿರ್ಧಾರ – ಶೀಘ್ರದಲ್ಲೇ ಅಧಿಕೃತ ಘೋಷಣೆ!
ನಾಳೆಯಿಂದ ಆರಂಭವಾಗುವ ದ್ವಿತೀಯ PUC ಪರೀಕ್ಷೆ – ಸಂಪೂರ್ಣ ಮಾಹಿತಿ ಇಲ್ಲಿದೆ!
SSLC ಮತ್ತು PUC ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಉಚಿತ KSRTC ಬಸ್ ಪ್ರಯಾಣ