ಬಂಡೇ ಸ್ವಾಮಿಯನ್ನು ವಿಡಿಯೋ ಕಾಲ್ ನಲ್ಲಿ ನಗ್ನ ಮಾಡಿಸಿದ ಯುವತಿ ಎಂಜಿನಿಯರಿಂಗ್ ವಿದ್ಯಾರ್ಥಿನಿ !

Team Newsnap
1 Min Read
Bande Swami in a video call scandal with an engineering student!ಬಂಡೇ ಸ್ವಾಮಿಯನ್ನು ವಿಡಿಯೋ ಕಾಲ್ ನಲ್ಲಿ ನಗ್ನ ಮಾಡಿಸಿದ ಯುವತಿ ಎಂಜಿನಿಯರಿಂಗ್ ವಿದ್ಯಾರ್ಥಿನಿ !

ಮಾಗಡಿ ತಾಲೂಕಿನ ಬಂಡೆ ಮಠದ ಬಸವಲಿಂಗ ಸ್ವಾಮಿ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಯುವತಿ ನೀಲಾಂಬಿಕೆ (21) ನಯವಾದ ಮಾತುಗಳಿಗೆ ವಿಡಿಯೋ ಕಾಲ್ ನಲ್ಲಿ ಸ್ವಾಮಿಯನ್ನೇ ನಗ್ನ ಮಾಡಿಸಿದ ಆ ಯುವತಿ ಎಂಜಿನಿಯರಿಂಗ್ ‌ ಓದುತ್ತಿದ್ದಾಳೆ.

ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕಾ ಅಲಿಯಾಸ್ ಚಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ. ರಜೆಯಲ್ಲಿ ತುಮಕೂರಿನಲ್ಲಿರುವ ಅಜ್ಜಿಯ ಮನೆಗೆ ಬರುತ್ತಿದ್ದಳು. ಈ ಸಂದರ್ಭದಲ್ಲಿ ಕಣ್ಣೂರು ಮೃತ್ಯಂಜಯ ಶ್ರೀಗಳ ಸಂಪರ್ಕಕ್ಕೆ ಯುವತಿ ಬಂದಿದ್ದಾಳೆ.ಮನೆಯಲ್ಲಿ ಭಗತ್ ಸಿಂಗ್ ಪಾತ್ರದ ಅಭ್ಯಾಸ – ನೇಣಿಗೆ ಕೊರಳು, ಬಾಲಕ ಸಾವು – ಚಿತ್ರದುರ್ಗದಲ್ಲಿ ದುರಂತ

ಈಕೆ ತಾನು ಹೇಳಿದಂತೆ ಕೇಳುತ್ತಾಳೆ ಎನ್ನುವುದು ತಿಳಿಯುತ್ತಿದ್ದಂತೆ ಬಂಡೇ ಮಠದ ಸ್ವಾಮಿಯನ್ನು ಸಿಕ್ಕಿ ಹಾಕಿಸಲು ಕಣ್ಣೂರು ತಂತ್ರ ಹೂಡಿದ್ದಾರೆ. ಇದಾದ ಬಳಿಕ ಯುವತಿ ಬಂಡೇ ಮಠದ ಸ್ವಾಮಿಗಳ ಪರಿಚಯ ಮಾಡಿಕೊಂಡಿದ್ದಾಳೆ.

ಸಲುಗೆ ಜಾಸ್ತಿ ಆಗುತ್ತಿದ್ದಂತೆ ಬಂಡೇ ಮಠದ ಸ್ವಾಮಿಯನ್ನು ತನ್ನ ತಾಳಕ್ಕೆ ತಕ್ಕಂತೆ ನೀಲಾಂಬಿಕಾ ಕುಣಿಸಿದ್ದಾಳೆ. ವೀಡಿಯೋ ಚಾಟ್ ಆರಂಭಿಸಿದ್ದು ಅಲ್ಲದೇ ಚಾಟಿಂಗ್‌ ವೇಳೆ ನಗ್ನವಾಗುವಂತೆ ಹೇಳಿದ್ದಾಳೆ. ಆಕೆಯ ವೈಯ್ಯಾರದ ಮಾತಿಗೆ ಮರುಳಾದ ಸ್ವಾಮಿನಗ್ನವಾಗಿದ್ದಾರೆ. ಈ ಸಂದರ್ಭದಲ್ಲಿ ವೀಡಿಯೋ ಕರೆಗಳನ್ನು ಆಕೆ ರೆಕಾರ್ಡ್‌ ಮಾಡುತ್ತಿದ್ದಳು.

ಆ ವೀಡಿಯೋ ಚಾಟಿಂಗ್ ರೆಕಾರ್ಡ್ ಅನ್ನು ಯುವತಿ ಮಹಾದೇವಯ್ಯನಿಗೆ ನೀಡುತ್ತಾಳೆ. ಮಹಾದೇವಯ್ಯ‌ ಆ ವೀಡಿಯೋವನ್ನು ಸಿಡಿ ಮಾಡಿ ಮುಖಂಡರಿಗೆ ಹಂಚಿದ್ದ ವಿಚಾರ ಈಗ ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

Share This Article
Leave a comment