PFI ನಿಷೇಧ – ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧಿಕರಣ ರಚನೆ

Team Newsnap
1 Min Read

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅಂಗಸಂಸ್ಥೆಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಪರಿಶೀಲಿಸುವ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ನ್ಯಾಯಮಂಡಳಿಯ ಅಧ್ಯಕ್ಷರಾಗಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಈಗ PFI ತನ್ನ ವಾದವನ್ನು ನ್ಯಾಯಮಂಡಳಿಯ ಮುಂದೆ ಮಂಡಿಸಲು ಅವಕಾಶ ಹೊಂದಿರುತ್ತದೆ. ಸರ್ಕಾರದ ನಿರ್ಧಾರವನ್ನು ಇಲ್ಲಿ PFI ಪ್ರಶ್ನೆ ಮಾಡಬಹುದಾಗಿದೆ. ವಿಚಾರಣೆ ಬಳಿಕ ನ್ಯಾಯ ಮಂಡಳಿ, ಸರ್ಕಾರದ ನಿಲುವಿನ ಬಗ್ಗೆ ತನ್ನ ತೀರ್ಪು ನೀಡಲಿದೆ.ಪಾಂಡವಪುರದಿಂದ ಮತ್ತೆ ಭಾರತ್ ಜೋಡೋ ಯಾತ್ರೆ :ಸೋನಿಯಾಗೆ ಸಾಥ್ ನೀಡಿದ ಕಾಂಗ್ರೆಸ್ ನಾಯಕರು

ಕಾಯಿದೆಯ ಸೆಕ್ಷನ್ 4 ರ ಅಡಿಯಲ್ಲಿ ಮಾಡಿದ ಆದೇಶವನ್ನು UAPA ನ್ಯಾಯಮಂಡಳಿಯು ದೃಢೀಕರಿಸದ ಹೊರತು ಅಂತಹ ಯಾವುದೇ ನಿಷೇಧವು ಜಾರಿಗೆ ಬರುವುದಿಲ್ಲ. ಈ ಹಿನ್ನೆಲೆ ಸರ್ಕಾರ ನ್ಯಾಯಮಂಡಳಿಯನ್ನು ರಚಿಸಿದೆ. ಈ ನ್ಯಾಯಮಂಡಳಿ ಪ್ರಕರಣದ ವಿಚಾರಣೆ ನಡೆಸಿ ಬಳಿಕ ಸರ್ಕಾರದ ನಿರ್ಧಾರದ ಬಗ್ಗೆ ತೀರ್ಪು ನೀಡಲಿದೆ.

Share This Article
Leave a comment