ಬೇಬಿ ಬೆಟ್ಟದಲ್ಲಿ 1600 ಎಕರೆ ಜಾಗ ರಾಜಮನೆತನದ್ದು: ಈ ಸರ್ಕಾರ ಯಾಕಿಷ್ಟು ಹಿಂಸೆ ಕೊಡುತ್ತೆ – ರಾಜಮಾತೆ ಪ್ರಶ್ನೆ

Team Newsnap
2 Min Read
Baby Betta belongs to royal family: violence from govt- Rajamate ಬೇಬಿ ಬೆಟ್ಟದಲ್ಲಿ 1600 ಎಕರೆ ಜಾಗ ರಾಜಮನೆತನದ್ದು: ಈ ಸರ್ಕಾರ ಯಾಕಿಷ್ಟು ಹಿಂಸೆ ಕೊಡುತ್ತೆ - ರಾಜಮಾತೆ ಪ್ರಶ್ನೆ

ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯ ಟ್ರಯಲ್ ಬ್ಲಾಸ್ಟ್​ ವಿವಾದಕ್ಕೆ ಮತ್ತೊಂದು ದಿಕ್ಕಿಗೆ ತಿರುಗಿದೆ.ಈ ಸರ್ಕಾರ ಯಾಕಿಷ್ಟು ನಮಗೆ ಹಿಂಸೆ ಕೊಡುತ್ತಿದ್ದಾರೆ ಎಂದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಪ್ರಶ್ನೆ ಮಾಡಿದ್ದಾರೆ.

ಈಗಾಗಲೇ ಟ್ರಯಲ್ ಬ್ಲಾಸ್ಟ್​​ ವಿರೋಧಿಸಿ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದ ರಾಜಮಾತೆ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಒಂದಷ್ಟು ದಾಖಲೆಗಳ ಸಮೇತ ಮಾಹಿತಿಗಳನ್ನು ನೀಡಿ ಪಾಂಡವಪುರ ತಾಲೂಕು ವ್ಯಾಪ್ತಿಯ ಬೇಬಿ ಬೆಟ್ಟ ಬೆಟ್ಟದ 1,600 ಎಕರೆ ಪ್ರದೇಶ ರಾಜಮನೆತನಕ್ಕೆ ಸೇರಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್​ ನಡೆಸಬಾರದು ಎಂದರು.ಇದನ್ನು ಓದಿ –ಚಾಮರಾಜನಗರದ DHO ಕಚೇರಿಯಲ್ಲಿ 3 ಸಾವಿರ ರು ಲಂಚ ಸ್ವೀಕಾರ – ACBಯಿಂದ ಎಫ್‌.ಡಿ.ಎ ಬಂಧನ

ಈ ಟ್ರಯಲ್ ಬ್ಲಾಸ್ಟ್ ನಿಂದ ಕೃಷ್ಣರಾಜಸಾಗರ ಅಣೆಕಟ್ಟಿಗೆ ಅಪಾಯ ತಂದೊಡ್ಡುತ್ತಿದೆ ಎಂದು ಹೇಳಲಾಗುತ್ತಿರುವ ಬೇಬಿ ಬೆಟ್ಟದಲ್ಲಿನ ಪರೀಕ್ಷಾರ್ಥ ಸ್ಫೋಟವನ್ನು ಕೂಡಲೇ ನಿಲ್ಲಿಸಬೇಕು.


ನಮಗೆ ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೆ ಎನ್ನುವುದು ನಂಗೆ ಗೊತ್ತಿಲ್ಲ ಎಂದು ಬೇಸರದಿಂದ ಹೇಳಿದರು.

WhatsApp Image 2022 07 26 at 5.41.30 PM

ರಾಜ್ಯ ವಿಲೀನ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ರಾಜ ವಂಶದ ನಡುವೆ ಒಪ್ಪಂದ ಏರ್ಪಟ್ಟಿತ್ತು. ರಾಜ ಮನೆತನಕ್ಕೆ ಒಂದಷ್ಟು ಖಾಸಗಿ ಆಸ್ತಿಯನ್ನು ಪಟ್ಟಿ ಮಾಡಿ ಇನ್ನುಳಿದ ಎಲ್ಲಾ ಆಸ್ತಿಗಳನ್ನು ದೇಶದೊಂದಿಗೆ ವಿಲೀನ ಮಾಡಿದರು. ಈ ಸಂಬಂಧ 1950ರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜವಂಶಸ್ಥ ನಡುವೆ ಒಪ್ಪಂದ ಏರ್ಪಟ್ಟಿದೆ.


ಇದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರ್ಕಾರಿ ಆದೇಶದ ಮೂಲಕ ಖಚಿತ ಪಡಿಸಲಾಗಿದೆ. ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವವರಿಗೆ ಗೊತ್ತಿದೆ. ಬೇಬಿ ಬೆಟ್ಟ ಸುತ್ತಲಿನ 1623 ಎಕರೆ ನಮ್ಮ ಖಾಸಗಿ ಆಸ್ತಿ. ಅಧಿಕಾರಿಗಳು ಅದನ್ನ ಬಿ ಕರಾಬು ಎಂದು ಘೋಷಿಸಿದರು.


ಅದರ ಪರಿಣಾಮವಾಗಿ ಗಾಣಿಗರಿಕೆ ಚಟುವಟಿಕೆ ಪ್ರಾರಂಭವಾಯಿತು. ಈಗ ಟ್ರಯಲ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ. ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು. ಎಲ್ಲವೂ ಗೊತ್ತಿದ್ದು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a comment