September 27, 2022

Newsnap Kannada

The World at your finger tips!

ranaveer

ನಗ್ನ ಫೋಟೋ ಶೂಟ್ : ದೀಪಿಕಾ ಪತಿ ರಣವೀರ್​ ವಿರುದ್ದ FIR ದಾಖಲು

Spread the love

ಬಾಲಿವುಡ್ ಸ್ಟಾರ್​ ರಣವೀರ್ ಸಿಂಗ್ ಪೇಪರ್ ಮ್ಯಾಗಜಿನ್​ಗಾಗಿ ಬೆತ್ತಲೆ ಫೋಟೋ ಶೂಟ್ ಮಾಡಿಸಿದ್ದಕ್ಕೆ ದೂರು ದಾಖಲಾಗಿದೆ.

ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮುಂಬೈ ಪೊಲೀಸರು ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಕಾರ್ಗಿಲ್ ವಿಜಯೋತ್ಸವದ ದಿನ kargil day

ರಣವೀರ್​ ಸಿಂಗ್​​ ಬೆತ್ತಲೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಕೆಲವು ಸ್ಟಾರ್ ನಟರು ರಣವೀರ್​ ಸಿಂಗ್​​ಗೆ ಬೆಂಬಲ ಕೂಡ ನೀಡಿದ್ದರು. ಟಿಎಂಸಿ ಸಂಸದೆ ಹಾಗೂ ಬೆಂಗಾಲಿ ಸ್ಟಾರ್ ನಟಿ ಮಿಮಿ ಚಕ್ರವರ್ತಿ, ರಣವೀರ್​ ಸಿಂಗ್​​ಗೆ ಬೆಂಬಲ ಸೂಚಿಸಿದ್ದರು.

ರಣವೀರ್ ಸಿಂಗ್ ವಿರುದ್ಧ ಎನ್​ಜಿಒ ಒಂದು ದೂರು ದಾಖಲಿಸಿದೆ. ಮುಂಬೈನ ಚೇಂಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

error: Content is protected !!