ಬಲ್ಗೇರಿಯಾದ ಬಾಬಾ ವಾಂಗಾ ಹೇಳಿದ 2021ರ ವರ್ಷದ ಭವಿಷ್ಯ ಹೇಗಿರುತ್ತದೆ ?

Team Newsnap
2 Min Read

ಎರಡೂ ಕಣ್ಣು ಕಾಣಿಸದಿರುವ ಬಲ್ಗೇರಿಯಾ ಬಾಬಾ ವಾಂಗಾ ಹೇಳಿರುವ 2021 ರ ಭವಿಷ್ಯದ ಪ್ರಕಾರ ಮುಂದಿನ ಮತ್ತೆ ಭಯಾನಕವಾಗಿದೆ.
ಆಕೆ ಈ ಹಿಂದೆ ಹೇಳಿರುವ ಎಲ್ಲಾ ಭವಿಷ್ಯಗಳು ಪ್ರಪಂಚದಲ್ಲಿ ನಿಜವಾಗಿವೆ.

2020 ರಂದು ಕಹಿಉಂಡ ಜನರಿಗೆ 2021 ಹರ್ಷ ತರಲಿ ಎಂಬ ಆಶಯದೊಂದಿಗೆ ಬಾಬಾ ವಾಂಗ ಹೇಳಿರುವ ಭವಿಷ್ಯದ ಬಗ್ಗೆ ತಿಳಿಸಿಕೊಡುವ ಒಂದು ಪ್ರಯತ್ನ.

2021ರ ಬಗ್ಗೆ ಈಕೆ ಹೇಳಿರುವುದು ಹೀಗಿದೆ:

  • ಜನರು ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲಿದ್ದಾರೆ, ಮಾನವೀಯತೆಗೆ ಬೆಲೆ ಇರುವುದಿಲ್ಲ.
  • ವಿನಾಶಕಾರಿ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಲಿದೆ. ಜನರು ಒಬ್ಬರು ಇನ್ನೊಬ್ಬರ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳಲಿದ್ದಾರೆ.
  • ನೈಸರ್ಗಿಕ ವಿಕೋಪ, ದುರಂತಗಳು ಭಾರಿ ಪ್ರಮಾಣದಲ್ಲಿ ಸಂಭವಿಸಲಿವೆ. (ಜಾಗತಿಕ ತಾಪಮಾನದ ಉತ್ಪಾತಗಳ ಮುನ್ಸೂಚನೆ).
  • ಮೂವರು ಬಲಾಢ್ಯರು ಒಂದಾಗಲಿದ್ದಾರೆ. (ಅಮೆರಿಕ, ಭಾರತ, ರಷ್ಯಾ ಬಗ್ಗೆ ಇದನ್ನು ಹೇಳಿರಬಹುದು)
  • ಬಲಿಷ್ಠವಾದ ಡ್ರ್ಯಾಗನ್ ವಿಶ್ವವನ್ನು ತನ್ನ ಮುಷ್ಠಿಗೆ ತೆಗೆದುಕೊಳ್ಳಲಿದೆ. (ಚೀನಾವನ್ನು ಡ್ರ್ಯಾಗನ್ ಎಂದೇ ಹೇಳುವುದು ರೂಢಿ. ಇದು ಜಗತ್ತಿನ ಆಗುಹೋಗುಗಳನ್ನು ನಿರ್ಧರಿಸಲಿದೆ).

” ಕೆಲವು ವಿದ್ರೋಹಿಗಳಲ್ಲಿ ಕೆಂಪು ಹಣ ಹಣ ಇರಲಿದೆ”.

  • ಈ ವರ್ಷದಲ್ಲಿ ಕ್ಯಾನ್ಸರ್ ಮಹಾಮಾರಿಗೂ ಔಷಧಿ ಸಿಗಲಿದೆ. ಕ್ಯಾನ್ಸರ್ ಅನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕುವ ದಿನ ಹತ್ತಿರ ಬಂದಿದೆ.
2020ರ ಬಗ್ಗೆ ಈಕೆ ಹೇಳಿದ್ದೇನು?

2020ರಲ್ಲಿ ಯುರೋಪಿಯನ್ ದೇಶಗಳ ಮೇಲೆ ಮುಸ್ಲಿಂ ಉಗ್ರರಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿ ನಡೆಯಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಫ್ರಾನ್ಸ್ ನಲ್ಲಿ ಮುಸ್ಲಿಂ ಜಿಹಾದಿಗಳ ದಾಳಿಗೆ ಮೂವರು ನಾಗರೀಕರು ಮೃತ ಪಟ್ಟಿದ್ದರು. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ದುರ್ಘಟನೆ ನಡೆದಿತ್ತು. ಇದಲ್ಲದ್ದೇ ಪಶ್ಚಿಮ ಯುರೋಪ್ ನಲ್ಲೂ ಅಲ್ಲಲ್ಲಿ ಉಗ್ರರ ದಾಳಿ ನಡೆದಿತ್ತು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ 2020ರ ವರ್ಷ ಅಪಾಯಕಾರಿಯಾಗಿದೆ. ಪುಟಿನ್ ಮೇಲೆ ಹತ್ಯಾ ಪ್ರಯತ್ನಗಳು ನಡೆಯಲಿವೆ ಎಂದು ಬಾಬಾ ವಂಗಾ ಹೇಳಿದ್ದರು. ತಮ್ಮ ಮೇಲೆ ನಾಲ್ಕು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿವೆ ಎಂಬುದನ್ನು ಈ ಹಿಂದೆ ಸ್ವತಃ ಪುಟಿನ್ ಬಹಿರಂಗಪಡಿಸಿದ್ದರು.

2020ರಲ್ಲಿ ಭೀಕರ ಪ್ರವಾಹ ಏಷ್ಯಾ ಖಂಡದಲ್ಲಿ ಉಂಟಾಗಲಿದೆ ಎಂದು ವಂಗಾ ನುಡಿದಿದ್ದರು. ಭಾರತ ಸೇರಿದಂತೆ ಹಲವು ಕಡೆ ಅತಿವೃಷ್ಟಿ ಉಂಟಾಗಿತ್ತು. ನವೆಂಬರ್ ತಿಂಗಳಲ್ಲಿ ಇರಾನ್, ಡಿಸೆಂಬರ್ ನಲ್ಲಿ ಇಂಡೋನೇಷ್ಯಾದಲ್ಲೂ ಪ್ರವಾಹ ಉಂಟಾಗಿತ್ತು. ಜೊತೆಗೆ, ಥಾಯ್ ಲ್ಯಾಂಡ್, ಶ್ರೀಲಂಕಾ, ಫಿಲಿಫೇನ್ಸ್ ಮುಂತಾದ ಕಡೆ ಪ್ರವಾಹ ಉಂಟಾಗಿತ್ತು.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ನುಡಿದ ಭವಿಷ್ಯದ ಪ್ರಕಾರ, ಟ್ರಂಪ್ 2020ರಲ್ಲಿ ತೀವ್ರ ಕಾಯಿಲೆಗೆ ತುತ್ತಾಗಲಿದ್ದಾರೆ, ಸಾಯಲೂಬಹುದು ಎನ್ನುವ ಭವಿಷ್ಯ ನುಡಿಯಲಾಗಿತ್ತು. ಟ್ರಂಪ್‌ಗೆ ಕೊರೊನಾ ಬಂದಿತ್ತು. ಆದರೆ ಅವರು ಬದುಕಿದರು. ಆದರೆ, ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನೀಡಿ, ಬೈಡೆನ್ ವಿರುದ್ದ ಸೋಲು ಅನುಭವಿಸಿದರು.

ಮಹಾಯುದ್ಧ?
ಯುರೋಪಿನಲ್ಲಿ ಮುಸ್ಲಿಂ-ಕ್ರೈಸ್ತ ಸಂಘರ್ಷದ ಬಗ್ಗೆ ಸ್ಪಷ್ಟವಾದ ಮುನ್ಸೂಚನೆಯನ್ನು ಈಕೆ ನೀಡಿದ್ದಾರೆ. “ಮಹಾ ಮುಸ್ಲಿಂ ಯುದ್ಧವು ಪ್ರಪಂಚದಾದ್ಯಂತ ಪ್ರಾರಂಭವಾಗಲಿದೆ. ಈ ಯುದ್ಧವು ಅರೇಬಿಯಾದ ಭೂಮಿಯಿಂದ ಪ್ರಾರಂಭವಾಗಲಿದೆ. ಈ ಯುದ್ಧವು ಸಿರಿಯಾದಲ್ಲಿ ಮತ್ತು ನಂತರ ಯುರೋಪಿನಲ್ಲಿ 2043ರ ಅಂತ್ಯದವರೆಗೆ ನಡೆಯುವುದು ಎನ್ನುವುದು ಬಾಬಾವಾಂಗ ಭವಿಷ್ಯ ನೀಡಿದ್ದಾಳೆ.

Share This Article
Leave a comment