March 12, 2026

Newsnap Kannada

The World at your finger tips!

rs

ಬಿ.ಶರತ್ ಸಿಎಟಿ ಅರ್ಜಿ ವಿಚಾರಣೆ: ಇಂದು ತೀರ್ಪು ?

Spread the love

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅವಧಿಗೂ ಮುನ್ನವೇ ತಮ್ಮನ್ನು ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿ.ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಇಂದು ತೀರ್ಪು ಸಿಗುವ ಸಾಧ್ಯತೆ ಇದೆ.

ಒಂದು ವೇಳೆ ತೀರ್ಪು ಹೊರ ಬಂದರೆ ಯಾರ ಅದೃಷ್ಟ ಗಟ್ಟಿ ಯಾಗಿದೆ ಎನ್ನುವುದನ್ನು ಕಾದು ನೋಡಬೇಕು.

ನವದೆಹಲಿಯ ಸಿಇಟಿ ನ್ಯಾಯಾಲಯ ಆನ್ ಲೈನ್ ನಲ್ಲಿ ವಿಚಾರಣೆ ನಡೆಸಿ ಇಂದೇ ತೀರ್ಪು ನೀಡುವ ಸಾಧ್ಯತೆ ಇದೆ.

ಕೇವಲ 29 ದಿನಕ್ಕೆ ತಮ್ಮನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನು ಆ ಜಾಗಕ್ಕೆ ನಿಯೋಜನೆಗೊಳಿಸಿದ ಸರ್ಕಾರದ ತೀರ್ಮಾನ ಪ್ರಶ್ನಿಸಿ ನಿರ್ಗಮಿತ ಡಿಸಿ ಶರತ್ ಸಿಎಟಿ ಮೊರೆ ಹೋಗಿದ್ದರು.

ಕಳೆದ ಎರಡು ತಿಂಗಳಿನಿಂದ ಈ ಬಗ್ಗೆ ವಿಚಾರಣೆ ನಡೆಸಿರುವ ಸಿಎಟಿ ಇಂದು ಕೂಡ ಅಂತಿಮವಾಗಿ ವಿಚಾರಣೆ ನಡೆಸಿ ಇಂದೇ ತೀರ್ಪು ನೀಡುವ ಸಾಧ್ಯತೆ ಇದೆ.

error: Content is protected !!