ಗಾಂಧೀಜಿ ಚಿಂತನೆ ಅಳವಡಿಸಿ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಹೊಸ ಪಕ್ಷದ ಹೆಸರು ಪ್ರಕಟಿಸಿದ ಆಜಾದ್

Team Newsnap
1 Min Read
Azad announced name of the new party 'Democratic Azad Party' ಗಾಂಧೀಜಿ ಚಿಂತನೆ ಅಳವಡಿಸಿ 'ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಹೊಸ ಪಕ್ಷದ ಹೆಸರು ಪ್ರಕಟಿಸಿದ ಆಜಾದ್

ಕಾಂಗ್ರೆಸ್​ ತೊರೆದು ಹೊರ ಬಂದಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಗಾಂಧಿ ಚಿಂತನೆಯಲ್ಲಿ’ ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂದು ಪಕ್ಷಕ್ಕೆ ಇಂದು ನಾಮಕರಣ ಮಾಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಆಜಾದ್, ಐಡಿಯಾಲಜಿ ಹಾಗೂ ನಮ್ಮದೇ ಸ್ವಂತತ್ರ ಯೋಚನೆಯಿಂದ ಪಕ್ಷವನ್ನು ಸ್ಥಾಪನೆ ಮಾಡಲಾಗಿದೆ. ಇದೊಂದು ಡೆಮಾಕ್ರಟಿಕ್ ಪಕ್ಷವಾಗಿದೆ. ಇದನ್ನು ಓದಿ –ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ: ವೈದ್ಯ, ಇಬ್ಬರು ಮಕ್ಕಳು ಸಜೀವ ದಹನ

ನಮ್ಮ ಮೊದಲ ಆದ್ಯತೆ ಪಕ್ಷಕ್ಕೆ ನಾಯಕರನ್ನು ನೊಂದಣಿ ಮಾಡಿಕೊಳ್ಳುವುದಾಗಿದೆ. ಚುನಾವಣೆ ಯಾವತ್ತೂ ಬೇಕಾದರೂ ನಡೆಯಬಹುದು ಎಂದರು.

ಇಂದಿನಿಂದ ನಾವು ರಾಜಕೀಯ ಚಟುವಟಿಕೆಗಳಲ್ಲಿ ನಿರಂತರವಾಗಿ ಇರುತ್ತೇವೆ. ಆಜಾದಿ ಪಕ್ಷದ ಕಲ್ ಬ್ಲ್ಯೂ, ವೈಟ್ ಮತ್ತು ಯೆಲ್ಲೋ ಆಗಿರಲಿದೆ. ಈಗಾಗಲೇ 1500 ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

Share This Article
Leave a comment