December 25, 2024

Newsnap Kannada

The World at your finger tips!

transfer , DYSP , state

34 DySPs transferred in the state ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ

ಮದ್ದೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆಗೆ ಯತ್ನ

Spread the love

ಮಂಡ್ಯ ತಾಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ದಾಳಿ ನಡೆಸಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಲು ಯತ್ನಿಸಿದ ಭೀಕರ ಘಟನೆ ಮದ್ದೂರು ತಾಲೂಕಿನಲ್ಲಿ ನಡೆದಿದೆ.

ಚಿನ್ನರಾಜ್ ಎಂಬಾತನ ಮೇಲೆ ನಂದನ್ ಎಂಬುವವನು ಕುಡುಗೋಲಿನಿಂದ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಚಿನ್ನರಾಜ್ ಕಣ್ಣಿಗೆ ಖಾರದ ಪುಡಿ ಎರಚಿ 40 ಕ್ಕೂ ಹೆಚ್ಚು ಬಾರಿ ನಂದನ್ ಹಲ್ಲೆ ನಡೆಸಿದ್ದು, ಚಿನ್ನರಾಜ್ ಸ್ಥಿತಿ ಗಂಭೀರವಾಗಿದೆ.

ಜಮೀನು ವ್ಯಾಜ್ಯ ಹಿನ್ನೆಲೆ ಇಬ್ಬರು ತಾಲೂಕು ಕಚೇರಿಗೆ ಬಂದಿದ್ದರು. ಚಿನ್ನರಾಜ್ ಪರ ತೀರ್ಪು ನೀಡುತ್ತಿದ್ದಂತೆ ಈ ವಿಚಾರಕ್ಕೆ ಪರಸ್ಪರ ಜಗಳ ನಡೆದಿದೆ. ಅಲ್ಲಿದ್ದವರೂ ಬಿಡಿಸಲು ಪ್ರಯತ್ನಿಸಿದರೂ ಆಗಲಿಲ್ಲ, ಬಳಿಕ ನಂದನ್ ಮೇಲೆ ಕಲ್ಲು ತೂರಿ ಚಿನ್ನರಾಜ್ ನನ್ನು ರಕ್ಷಿಸಲಾಗಿದೆ. ಕಲ್ಲು ತೂರಿದ್ದರಿಂದ ನಂದನ್ ಕೂಡ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!