ಬೆಂಗಳೂರಿನಲ್ಲಿ‌ ಪ್ಲೈಓವರ್‌ನಿಂದ ಹಣ ಚೆಲ್ಲಿದ ವ್ಯಕ್ತಿ : ನೋಟು ಎರಚಿ ಎಸ್ಕೇಪ್‌

Team Newsnap
0 Min Read

ಬೆಂಗಳೂರಿನ ಕೆ.ಆರ್‌ ಮಾರ್ಕೇಟ್‌ ಬಳಿ ಪ್ಲೈಓವರ್‌ ಮೇಲಿಂದ ಅಪರಿಚಿತ ವ್ಯಕ್ತಿಯೊಬ್ಬ ಹಣವನ್ನು ಎರಚಿ ಪರಾರಿಯಾದ ಘಟನೆ ಕುತೂಹಲಕ್ಕೆ ಕಾರಣವಾಗಿದೆ.

ಜೀವನದಲ್ಲಿ ಜಿಗುಪ್ಸೆ ಬಂದಿದೆ ಎನ್ನುತ್ತಿದ್ದ ಆ ವ್ಯಕ್ತಿ ಗರಿಗರಿಯ 10 ರು ನೋಟು ಸುರಿಸಿ ಎಸ್ಕೇಪ್‌ ಆಗಿದ್ದಾರೆ. ಮಳೆ ನೀರಿನಂತೆ ನೋಟುಗಳನ್ನು ಸುರಿದ ಫೋಟೋಗಳು ವೈರಲ್‌ ಆಗಿದೆ.

ಸಿಲಿಕಾನ್ ಸಿಟಿಯ ಕೆ.ಆರ್ ಮಾರ್ಕೇಟ್ ಬಳಿ ಪ್ಲೈಓವರ್ ಮೇಲಿಂದ ಹಣ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುಣ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಘಟನೆ ಬಗ್ಗೆ ಕಾರಣ ನೀಡುವಂತೆ ನೋಟಿಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Share This Article
Leave a comment