ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ – ಹನುಮ ಮಾಲಾಧಾರಿಗಳ ಮೇಲೆ ಹಲ್ಲೆ :ಯುವಕನಿಗೆ ಧರ್ಮದೇಟು

Team Newsnap
1 Min Read

ಸಂಕೀರ್ತನಾ ಯಾತ್ರೆಯಲ್ಲಿ ಹನುಮ ಮಾಲಾಧಾರಿಗಳ ಮೇಲೆ ಯುವಕನೊಬ್ಬ ಹಲ್ಲೆಗೆ ಮುಂದಾದ ಘಟನೆ ಶ್ರೀರಂಗಪಟ್ಟಣದಲ್ಲಿ ಗುರುವಾರ ಜರುಗಿದೆ.

ಹನುಮ ಜಯಂತಿ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ ನಡೆಯುತ್ತಿತ್ತು.

ಸಂಕೀರ್ತನಾ ಯಾತ್ರೆ ವೇಳೆ ಯುವಕನೊಬ್ಬ ಮಧ್ಯಪ್ರವೇಶಿಸಿ, ಹನುಮ ಮಾಲಾಧಾರಿಗಳ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾನೆ. ಆದರೆ ಯುವಕನನ್ನು ಹನುಮ ಮಾಲಾಧಾರಿಗಳು ಚೆನ್ನಾಗಿ ಥಳಿಸಿದ್ದಾರೆ.

ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಯುವಕನಿಗೆ ಏಟು ಬೀಳುವುದನ್ನು ತಡೆದಿದ್ದಾರೆ.

ಸಂಕೀರ್ತನಾ ಯಾತ್ರೆ ಹೆಸರಲ್ಲಿ ಜಾಮಿಯ ಮಸೀದಿ ದ್ವಂಸಕ್ಕೆ ಸಂಚು ರೂಪಿಸಲಾಗಿದೆ ಎಂದು ಮುಸ್ಲಿಂ ಮುಖಂಡರು ಗಂಭೀರ ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗಬಾರದೆಂದು ಮೊದಲೇ 1000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿ ಬಿಗಿ ಭದ್ರತೆ ನೀಡಲಾಗಿತ್ತು.

ಜಾಮೀಯಾ ಮಸೀದಿಗೆ ಭಾರಿ ಬಂದೋಬಸ್ತ್ ಮಾಡಿ, ಮಸೀದಿ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಅಷ್ಟೇ ಅಲ್ಲದೇ ಸಾರ್ವಜನಿಕರಿಗೆ ಮಸೀದಿ ಪ್ರವೇಶ ನಿರ್ಬಂಧ ಹೇರಲಾಗಿತ್ತು.

Share This Article
Leave a comment