November 27, 2021

Newsnap Kannada

The World at your finger tips!

ಆರ್ಯನ್ ಗೆಳತಿ ಅನನ್ಯಾ ಪಾಂಡೆ ನಿವಾಸದ ಮೇಲೆ ದಾಳಿ: ಮೊಬೈಲ್, ಲ್ಯಾಪ್​ಟ್ಯಾಪ್ NCB ಅಧೀನಕ್ಕೆ

Spread the love

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎನ್​ಸಿಬಿ ಅಧಿಕಾರಿಗಳು ಬಾಲಿವುಡ್ ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ ದಾಳಿ ನಡೆಸಿದ್ದರು.

ದಾಳಿಯ ನಂತರ ಅನನ್ಯಾ ಪಾಂಡೆಗೆವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.

2 ಗಂಟೆಗೆ ಹಾಜರಾಗಬೇಕಿದ್ದ ಅನನ್ಯಾ ಪಾಂಡೆ ತಡವಾಗಿ ವಿಚಾರಣೆಗೆ ಹಾಜರಾಗಲು ಮುಂದಾಗಿದ್ದಾರೆ.

ಈ ವೇಳೆ ತನ್ನ ತಂದೆ ಚಂಕಿ ಪಾಂಡೆಯನ್ನೂ ಸಹ ಜೊತೆಯಲ್ಲೇ ಕರೆತಂದಿದ್ದಾರೆ ಎನ್ನಲಾಗಿದೆ. ಇನ್ನು ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ಎನ್​ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆಯವರ ಮೊಬೈಲ್ ಹಾಗೂ ಲ್ಯಾಪ್​ಟಾಪ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಶಾರೂಖ್ ಖಾನ್ ನಿವಾಸದ ಮೇಲೂ ದಾಳಿ ನಡೆಸಿದ್ದ ಅಧಿಕಾರಿಗಳು ಮನ್ನತ್ ನಿವಾಸದಿಂದ ವಾಪಸ್ಸಾಗಿದ್ದಾರೆ.

error: Content is protected !!