October 4, 2024

Newsnap Kannada

The World at your finger tips!

kejrival

ಅರವಿಂದ ಕ್ರೇಜಿವಾಲ್ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ – ಅಮ್ ಆದ್ಮಿ ವಕ್ತಾರೆ ಪ್ರಿಯಾಂಕ

Spread the love

ನವದೆಹಲಿ : ಆಮ್ ಆದ್ಮಿ ಪಕ್ಷವು ಅರವಿಂದ ಕೇಜ್ರಿವಾಲ್ ಅವರು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಬುಧವಾರ ಪ್ರಸ್ತಾಪಿಸಿದೆ.

ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಇಡೀ ದೇಶಕ್ಕೆ ಮಾದರಿ ಆಡಳಿತ ಮತ್ತು ಜನೋಪಯೋಗಿ ಯೋಜನೆಗಳನ್ನು ನೀಡಿದ್ದಾರೆ ಎಂದು ಹೇಳಿದೆ.

ಪಕ್ಷದ ಮುಖ್ಯ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ಮಾತನಾಡಿ, ಕೇಜ್ರಿವಾಲ್ ಯಾವಾಗಲೂ ‘ಲಾಭದಾಯಕ ಮತ್ತು ಜನಪರ’ ಬಜೆಟ್ ಅನ್ನು ಮಂಡಿಸಿದ್ದಾರೆ.

ಇಂಡಿಯಾ ಮೈತ್ರಿಕೂಟದ ಸಭೆಯು ನಾಳೆ ಮುಂಬೈನಲ್ಲಿ ನಡೆಯುವುದರಿಂದ ಅಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಎದುರಿಸಲು ಮತ್ತು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ವಿರೋಧ ಪಕ್ಷದ ನಾಯಕರು ಜಂಟಿ ಪ್ರಚಾರ ತಂತ್ರವನ್ನು ರೂಪಿಸುವ ನಿರೀಕ್ಷೆಯಿದೆ

ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಕಕ್ಕರ್, ‘ವಕ್ತಾರೆಯಾಗಿ ನಾನು ನಮ್ಮ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಹೆಸರನ್ನು ಪ್ರಸ್ತಾಪಿಸುತ್ತೇನೆ. ಕೇಜ್ರಿವಾಲ್ ನಿರಂತರವಾಗಿ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ ಮತ್ತು ಮಾದರಿ ಆಡಳಿತ ನೀಡಿದ್ದಾರೆ. ಇದು ದೆಹಲಿಯಲ್ಲಿ ಕನಿಷ್ಠ ಹಣದುಬ್ಬರಕ್ಕೆ ಕಾರಣವಾಯಿತು’ ಎಂದು ಅವರು ಹೇಳಿದರು.ಯುವ ನಿಧಿ’ ಯೋಜನೆ ಡಿಸೆಂಬರ್‌/ಜನವರಿಯಲ್ಲಿ ಜಾರಿ: ಸಿಎಂ ಸಿದ್ದು

ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತಹ ಮಾದರಿಯನ್ನು ದೇಶಕ್ಕೆ ನೀಡಿದ್ದಾರೆ. ಹೀಗಾಗಿ, ಅವರೇ ಪ್ರಧಾನಿ ಅಭ್ಯರ್ಥಿ ಆಗಬೇಕೆಂದು ನಾನು ಬಯಸುತ್ತೇನೆ. ಆದರೆ, ನಿರ್ಧಾರ ನನ್ನ ಕೈಯಲ್ಲಿಲ್ಲ’ ಎಂದಿದ್ದಾರೆ

Copyright © All rights reserved Newsnap | Newsever by AF themes.
error: Content is protected !!