January 14, 2026

Newsnap Kannada

The World at your finger tips!

mandya , PFI , president

Arrest of PFI district president and 4 leaders in Mandya ಮಂಡ್ಯದಲ್ಲಿ PFI ಜಿಲ್ಯಾಧ್ಯಕ್ಷ ಸೇರಿ ನಾಲ್ವರು ಮುಖಂಡರ ಬಂಧನ - ಪ್ರತಿಭಟನೆ ಮಾಡಿದ ಕಾರ್ಯಕರ್ತರು

ಮಂಡ್ಯದಲ್ಲಿ PFI ಜಿಲ್ಯಾಧ್ಯಕ್ಷ ಸೇರಿ ನಾಲ್ವರು ಮುಖಂಡರ ಬಂಧನ – ಪ್ರತಿಭಟನೆ ಮಾಡಿದ ಕಾರ್ಯಕರ್ತರು

Spread the love

ಮಂಡ್ಯದಲ್ಲಿ ಮಂಗಳವಾರ ಪಿಎಫ್‌ಐ ಜಿಲ್ಲಾಧ್ಯಕ್ಷ ಸೇರಿದಂತೆ ನಾಲ್ವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ

ಜಿಲ್ಲಾಧ್ಯಕ್ಷ ಶಾಹಿದ್ ಇರ್ಫಾನ್ ಸೇರಿದಂತೆ ಮೂವರು ವಶಕ್ಕೆ.ಇದನ್ನು ಓದಿ –ಪರಸ್ಪರ ಮದ್ವೆಯಾಗಲು ನಿರ್ಧರಿಸಿದ್ದ ಬೆಂಗಳೂರಿನ ಶಾಲಾ ಬಾಲಕಿಯರು.


ಪಿಎಫ್‌ಐ ಸಂಘಟನೆಗೆ ಬೇರೆ ಮೂಲಗಳಿಂದ ಹಣ ಜಮಾವಣೆ ಹಿನ್ನೆಲೆ ಪೋಲಿಸರು ವಿಚಾರಣೆಗಾಗಿ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕಳೆದ ಮಧ್ಯರಾತ್ರಿಯೇ ನಾಲ್ವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಶಾಹಿದ್ ಇರ್ಫಾನ್‌ನನ್ನು ಬೆಳಗಿನ ಜಾವ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.

ನ್ಯಾಯಾಧೀಶರು ಅಕ್ಟೋಬರ್ 6ವರೆಗೆ ಇರ್ಫಾನ್ ಗೆ ನ್ಯಾಯಾಂಗ ಬಂಧನ ಕೊಟ್ಟಿದ್ದಾರೆ. ಉಳಿದ ಮೂವರನ್ನು ಮಂಡ್ಯ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ

ಮುಖಂಡರ ಬಂಧನ ಖಂಡಿಸಿ ಪ್ರತಿಭಟನೆ :

PFI ಜಿಲ್ಲಾಧ್ಯಕ್ಷ ಶಾಹಿದ್ ಇರ್ಫಾನ್ ಬಂಧನ ವಿಚಾರ ತಿಳಿದ ನಂತರ ಮಂಡ್ಯದಲ್ಲಿ PFI ಕಾರ್ಯಕರ್ತರ ಪ್ರತಿಭಟನೆ ನಡೆಸಿದರು

ಶಾಹಿದ್ ಇರ್ಫಾನ್ ಬಂಧನ ಖಂಡಿಸಿ ಮಂಡ್ಯ ನಗರದ ವಿನೋಬ ರಸ್ತೆಯಲ್ಲಿ ಪ್ರತಿಭಟನೆ ಮಾಡಿದರು ಪ್ರತಿಭಟನೆ ವೇಳೆ PFI ಜಿಂದಾಬಾದ್ ಘೋಷಣೆಕೂಗಿದರು.

ಶಾಹಿದ್ ಇರ್ಫಾನ್ ಬೆಳಗಿನ ಜಾವ ಜೆಸಿ ಮುಂದೆ ಹಾಜರು ಪಡಿಸಿದ ಖಾಕಿ. ಉಳಿದ ಮೂವರಿಗೆ ಡ್ರಿಲ್ ಮುಂದುವರಿದೆ.

error: Content is protected !!