ರಾಜ್ಯದ 7 ನೂತನ ವಿ.ವಿ.ಗಳಿಗೆ ಕುಲಪತಿಗಳ ನೇಮಕ- ಡಾ. ಅಶ್ವತ್ಥ್ ನಾರಾಯಣ

Team Newsnap
1 Min Read
High Court stays against FIR on former minister Ashwath Narayan ಮಾಜಿ ಸಚಿವ ಅಶ್ವತ್ಥ್ ನಾರಾಯಣ ವಿರುದ್ದದ FIR ಗೆ ಹೈಕೋರ್ಟ್ ತಡೆ

ರಾಜ್ಯ ಸರಕಾರವು ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳನ್ನು ನೇಮಿಸಿ, ಸೋಮವಾರ ಆದೇಶ ಹೊರಡಿಸಿದೆ.

ಈ ಸಂಗತಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ

1) ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಡಾ.ಬಿ ಕೆ ರವಿ ಅವರನ್ನು ಕೊಪ್ಪಳ ವಿವಿ.

2) ಬಾಗಲಕೋಟೆಯ ತೋಟಗಾರಿಕೆ ವಿ.ವಿ.ದ ಡಾ.ಅಶೋಕ ಸಂಗಪ್ಪ ಆಲೂರು.

3) ಕೊಡಗು ವಿವಿ, ಮೈಸೂರು ವಿವಿ ಮಾನವಶಾಸ್ತ್ರ ವಿಭಾಗದ ಡಾ.ಎಂ ಆರ್‍‌ ಗಂಗಾಧರ.

4) ಚಾಮರಾಜನಗರ ವಿವಿಗೆ ಬೆಳಗಾವಿಯ ಕೆ.ಎಸ್‌.ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಆನಂದ್‌ ಶರದ್‌ ದೇಶಪಾಂಡೆ.

5) ಬಾಗಲಕೋಟೆ ವಿವಿ, ಕುವೆಂಪು ವಿ.ವಿ.ದ ಡಾ.ಬಿ ಎಸ್‌ ಬಿರಾದಾರ್‍‌.

6) ಬೀದರ್‍‌ ವಿವಿ, ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದ ಡಾ.ಸುರೇಶ್‌ ಎಚ್‌ ಜಂಗಮಶೆಟ್ಟಿ.

7) ಹಾವೇರಿ ವಿವಿ ಮತ್ತು ಧಾರವಾಡದ ಕರ್ನಾಟಕ ವಿ.ವಿ.ದ ನಿವೃತ್ತ ಪ್ರೊಫೆಸರ್‍‌ ಆಗಿರುವ ಡಾ.ಟಿ ಸಿ ತಾರಾನಾಥ್‌ ಅವರನ್ನು ಹಾಸನ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಿಸಲಾಗಿದೆ .

ಸರಕಾರವು ಜಿಲ್ಲೆಗೆ ಒಂದಾದರೂ ವಿಶ್ವವಿದ್ಯಾಲಯ ಇರಬೇಕು ಎನ್ನುವ ತತ್ತ್ವದಡಿಯಲ್ಲಿ ಈ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಇದನ್ನು ಓದಿ –ಪದವೀಧರ ಯುವಕರಿಗೆ ನಾಲ್ಕನೇ ಗ್ಯಾರೆಂಟಿ ಘೋಷಿಸಿದ ಕಾಂಗ್ರೆಸ್ : ಮಾಸಿಕ 3 ಸಾವಿರ ರು

Share This Article
Leave a comment