ಬೆಂಗಳೂರಿನ ಹೊಸಕೋಟೆ ದೇವಸ್ಥಾನವೊಂದರ ಕಳ್ಳತನ ಆರೋಪಿಯ ಬಂಧನಕ್ಕೆ ಪೊಲೀಸರು ತೆರಳಿದ್ದ ವೇಳೆ ಸೈನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜರುಗಿದೆ.
ಆಂಧ್ರ ಪ್ರದೇಶ ಮೂಲದ ಆರೋಪಿ ಶಂಕರ್ ರಾಜಕಾರಣಿ ಆಗಬೇಕು ಅಂತಾ ಕನಸು ಕಂಡಿದ್ದ. ಆದರೆ ಕಳ್ಳತನದ ಹಾದಿ ಹಿಡಿದಿದು, ಕೊನೆಗೆ ಮರ್ಯಾದೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮದನಪಲ್ಲಿ ಶಂಕರ್ ತಾನು ರಾಜಕಾರಣಿಯಾಗಬೇಕು ಎಂದು ಕನಸು ಕಂಡಿದ್ದ. ಅಲ್ಲದೇ ವೈಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ತಾನು ಜನಸೇವೆ ಮಾಡಿ ರಾಜಕಾರಣದಲ್ಲಿ ಹೆಸರು ಪಡಿಬೇಕು ಅಂತಾ ಅಂದ್ಕೊಂಡಿದ್ದ. ಆದರೆ ಇದಕ್ಕಾಗಿ ಶಂಕರ್ ಹಿಡಿದ ದಾರಿ ಮಾತ್ರ ಕಳ್ಳತನ ಮಾಡುವುದಾಗಿತ್ತು.
ಹೊಸಕೋಟೆ ಬಳಿಯ ದೇವಸ್ಥಾನಕ್ಕೆ ಆರೋಪಿಗಳು ಬರೋ ಮಾಹಿತಿ ಪೊಲೀಸರಿಗೆ ಬಂದಿತ್ತು. ಈ ವೇಳೆ ಹಿಡಿಯೋಕೆ ಹೋದಾಗ ಸೈನೈಡ್ ನುಂಗಿ ಆರೋಪಿ ಶಂಕರ್ ಸಾವನ್ನಪ್ಪಿದ್ದ.
ತಾನು ಕಳ್ಳ ಅಂತಾ ಗೊತ್ತಾದರೆ ಜನ ನನ್ನನ್ನು ನಂಬುವುದಿಲ್ಲ. ತಾನು ರಾಜಕಾರಣದಲ್ಲಿ ಬೆಳೆಯಲ್ಲ. ತನ್ನ ರಾಜಕೀಯ ಜೀವನಕ್ಕೆ ಡ್ಯಾಮೇಜ್ ಆಗುತ್ತೆ ಅನ್ನೋ ಭಯದಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ