ಖುದ್ದು ವಿಚಾರಣೆ ; ರೋಹಿಣಿ ಸಿಂಧೂರಿ, ತಹಶೀಲ್ದಾರ್ ಗೆ ಹೈಕೋರ್ಟ್ ನೋಟಿಸ್

Team Newsnap
1 Min Read

ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂಬರ್ 4 ಕ್ಕೆ ಸಂಬಂಧಿಸಿದಂತೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ತಹಶೀಲ್ದಾರ್ ರಕ್ಷಿತ್ ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮೈಸೂರಿನ ಕುರುಬಾರಹಳ್ಳಿ ಮತ್ತು ಚೌಡಳ್ಳಿಯಲ್ಲಿರುವ ಸಾವಿರಾರು ಎಕರೆ ಭೂಮಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮೈಸೂರು ರಾಜವಂಶಸ್ಥರ ಪರ ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಮನವಿ ತಿರಸ್ಕರಿಸಿತು. ಹೀಗಾಗಿ ಕಾನೂನು ಹೋರಾಟದಲ್ಲಿ
ಮೈಸೂರು ರಾಜವಂಶಸ್ಥರ ಕೈ ಮೇಲಾಯಿತು.

ನ್ಯಾಯಲಯದ ತೀರ್ಪಿನಂತೆ ಭೂ ಮಾಲೀಕರಿಗೆ ಸರ್ಕಾರ ಖಾತೆ ಮಾಡಿಕೊಡಬೇಕಿತ್ತು. ಆದರೆ ಸರ್ಕಾರ ಈ ವಿಚಾರದಲ್ಲಿ ಬೇಜವಾಬ್ದಾರಿ ತೋರಿತು.

ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಖುದ್ದು ಹಾಜರಾಗುವಂತೆ ರೋಹಿಣಿ ಸಿಂಧೂರಿ ಮತ್ತು ತಹಶೀಲ್ದಾರ್ ರಕ್ಷಿತ್ ಅವರಿಗೆ ಹೈಕೋರ್ಟ್ ಆದೇಶ ನೀಡಿದೆ.

ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ, ನ್ಯಾಯಾಂಗ ನಿಂದನೆ ಕೇಸ್ ನಲ್ಲಿ ಕೋರ್ಟ್ ಇಬ್ಬರಿಗೂ ಶಿಕ್ಷೆ ವಿಧಿಸುವ ಸಾಧ್ಯತೆ ಯನ್ನು ತಳ್ಳಿ ಹಾಕುವಂತೆ ಇಲ್ಲ.

Share This Article
Leave a comment