ಮಂಡ್ಯದಲ್ಲಿ ನಾಳೆ ಶ್ರೀ ಅನಂತ ಪ್ರಶಸ್ತಿ ಪ್ರಧಾನ ಸಮಾರಂಭ

Team Newsnap
1 Min Read

ಮಂಡ್ಯ: ನಗರದ ಅಭಿನವ ಭಾರತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಅನಂತಕುಮಾರ ಸ್ವಾಮೀಜಿ ಅವರ 87ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಅನಂತ ಪ್ರಶಸ್ತಿ ಪ್ರಧಾನ ಸಮಾರಂಭವು ನಗರದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ನಾಳೆ (ಆ. 3ರಂದು) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ

ರಾಜ್ಯದಲ್ಲಿ 211 ಮಂದಿ ಪೋಲಿಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿದ ಸರ್ಕಾರ

ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಶಿವಮೂರ್ತಿ ಕೀಲಾರ ರವರು ಈ ವಿಷಯ ತಿಳಿಸಿ ಈ ಕಾರ್ಯಕ್ರಮದಲ್ಲಿ ವೈದ್ಯಕೀಯ, ಯೋಗ ಶಿಕ್ಷಣ, ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಆದಿಚುಂಚನಗಿರಿ ಶ್ರೀ ಮಠದ ಕಾರ್ಯದರ್ಶಿ ಪೂಜ್ಯ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಹೃದ್ರೋಗ ತಜ್ಞ ಡಾ. ಸಿ ಎನ್ ಮಂಜುನಾಥ್, ಯೋಗಾತ್ಮ ಶ್ರೀ ಹರಿ ರವರಿಗೆ ಪೂಜ್ಯ ಶ್ರೀ ಅನಂತಕುಮಾರ ಸ್ವಾಮೀಜಿ ರವರ ಹೆಸರಿನಲ್ಲಿ ಶ್ರೀ ಅನಂತ ಪ್ರಶಸ್ತಿ ಯನ್ನು ನೀಡಲಾಗುವುದು ಎಂದಿದ್ದಾರೆ. ಪಕ್ಷ ವಿರೋಧಿಗಳ ಮೇಲೆ ಕ್ರಮ: ಇಲ್ಲದೇ ಹೋದರೆ ಮುಂದಿನ ದಾರಿ ಬೇರೆ – ರಾಜಣ್ಣ

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದ ಸ್ವಾಮಿಜಿ ವಹಿಸಲಿದ್ದು, ಚಂದನವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿರವರು ಆಶೀರ್ವಚನ ನೀಡಲಿದ್ದಾರೆ ಹಾಗೂ ಪ್ರಶಸ್ತಿ ಪ್ರದಾನ ಪಿ ಜಿ ಆರ್ ಸಿಂಧ್ಯಾ ರವರು ನಡೆಸಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಮಿಯಾಮಿ ಫ್ಲೋರಿಡಾ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹಲ್ಲೆಗೆರೆ ಮೂರ್ತಿ ಎಂ.ಡಿ ರವರು ವಹಿಸಲಿದ್ದಾರೆ ಎಂದು ತಿಳಿಸಿದರು.

ಮಂಡ್ಯ

#Mandyanews, #Mysorenews, #Karnatakanews, #bestkannadanews #abhinavabharathi #lalbhag #mandya #trendingkannadanews #anantha

Share This Article
Leave a comment