ಲಕ್ಷಂತಾರ ರು ಬೆಲೆ ಬಾಳುವ ಅಂಬರ್ಗಿಸ ವಶ :ಅರಣ್ಯ ಪೋಲಿಸರ ಕಾರ್ಯಾಚರಣೆ

Team Newsnap
1 Min Read

ಕೊಳ್ಳೇಗಾಲ : ಅಗರ -ಮಾಂಬಳ್ಳಿ ವ್ಯಾಪ್ತಿಯ ಟಗರಪುರ ಗ್ರಾಮದ ಕೆನರಾ ಬ್ಯಾಂಕ್ ಬಳಿಯಲ್ಲಿ ಕಾರವಾರ ಜಿಲ್ಲೆಯ ಭಟ್ಕಳ ತಾಲೂಕಿನ ಸಿರಾಲಿ ಗ್ರಾಮದ ಬಾಬು ಅಣ್ಣಪ್ಪ ನಾಯ್ಕ.(49) ಮಂಜುನಾಥ್ ದೇವಾಡಿಗ (49) ಎಂಬುವ ಇಬ್ಬರು ವ್ಯಕ್ತಿಗಳು 3 ಕೆಜಿ ತಿಮಿಂಗಲದ ವಾಂತಿ (ಅಂಬರ್ಗಿಸ) ವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಾರುತಿ ಸುಜುಕಿ ಕಾರಿನಲ್ಲಿ ಮೈಸೂರಿನಿಂದ ತಮಿಳುನಾಡಿನ ಕೊಯಾಮತ್ತೂರು ಕಡೆಗೆ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆಯಲ್ಲಿ ಕೊಳ್ಳೇಗಾಲ ಅರಣ್ಯ ಸಂಚಾರಿ ಪೊಲೀಸರು ಇಬ್ಬರು ಆರೋಪಿಗಳನ್ನು ಮಾಲು ಸಮೇತ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಆರೋಪಿಗಳ ಹತ್ತಿರ ಮಾರುತಿ ಸುಜುಕಿ ಕಾರು ಮತ್ತು 5470 ರೂ ನಗದು ಹಾಗು ಎರಡು ಮೊಬೈಲ್ ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಗಲ್ಲು, ಗ್ಯಾಂಗ್ ರೇಪ್ ಗೆ- 20 ವರ್ಷ ಶಿಕ್ಷೆ – ಅಮಿತ್ ಶಾ

ಈ ಕಾರ್ಯಾಚರಣೆಯಲ್ಲಿ ಪಿ ಎಸ್ ಐ ವಿಜಯರಾಜ್.ಮುಖ್ಯ ಪೇದೆಗಳಾದ ಬಸವರಾಜು ಎಂ.ಶಂಕರ್ ಕೆ. ರಾಮಚಂದ್ರ ಎಂ. ವಿ ಸ್ವಾಮಿ.ಪೇದೆ.ಬಸವರಾಜ್ ಜಿ. ಹಾಗು ಕಾರು ಚಾಲಕ ಪ್ರಭಾಕರ್ ಭಾಗವಹಿಸಿದ್ದರು.

ವರದಿ :- ನಾಗೇಂದ್ರ ಪ್ರಸಾದ್

Share This Article
Leave a comment