November 3, 2024

Newsnap Kannada

The World at your finger tips!

WhatsApp Image 2023 04 24 at 10.40.49 PM

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಗಲ್ಲು, ಗ್ಯಾಂಗ್ ರೇಪ್ ಗೆ- 20 ವರ್ಷ ಶಿಕ್ಷೆ – ಅಮಿತ್ ಶಾ

Spread the love

ದೆಹಲಿ : ಕೇಂದ್ರ ಸರ್ಕಾರದಿಂದ ದೇಶದಲ್ಲಿನ ಗ್ಯಾಂಗ್ ರೇಪ್ ನಂತಹ ಪ್ರಕರಣ ತಡೆಗಟ್ಟಲು ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ.

ಈ ನಿಟ್ಟಿನಲ್ಲಿ ಲೋಕಸಭೆಯಲ್ಲಿ ತಿದ್ದುಪಡಿ ಮಸೂಧೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ.

ಈ ತಿದ್ದುಪಡಿ ಮಸೂದೆಯಂತೆ ಇನ್ಮುಂದೆ ಗ್ಯಾಂಗ್ ರೇಪ್ ಮಾಡಿದವರಿಗೆ 20 ವರ್ಷ ಶಿಕ್ಷೆ ವಿಧಿಸುವಂತ ಕಾನೂನು ಜಾರಿಯಾಗಲಿದೆ.

ಈ ಸಂಬಂಧ ಸಂಸತ್ ಮುಂಗಾರು ಅಧಿವೇಶನದ ಕೊನೆಯ ದಿನದಂದು ಲೋಕಸಭೆಯಲ್ಲಿ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದರು.

ಈ ವೇಳೆ ಮಾತನಾಡಿದ ಅವರು, ನಾನು ಇಂದು ಮಂಡಿಸುತ್ತಿರುವ ಮೂರು ಮಸೂದೆಗಳಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಮೂಲ ಕಾನೂನು ಸೇರಿದೆ. ಮೊದಲನೆಯದು 1860 ರಲ್ಲಿ ರೂಪುಗೊಂಡ ಭಾರತೀಯ ದಂಡ ಸಂಹಿತೆ, ಎರಡನೆಯದು 1898 ರಲ್ಲಿ ರೂಪುಗೊಂಡ ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಮೂರನೆಯದು 1872 ರಲ್ಲಿ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆ. ಬ್ರಿಟಿಷರು ತಂದ ಈ ಕಾನೂನುಗಳನ್ನು ನಾವು ಇಂದು ಕೊನೆಗೊಳಿಸುತ್ತೇವೆ ಎಂದರು.

ಅಪರಾಧ ಕಾನೂನು ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗಿದೆ. ಈ ಕಾಯ್ದೆಯಲ್ಲಿ ಹಳೇ ಅಂಶಗಳನ್ನು ತೆಗೆದು ಹೊಸ ಅಂಶ ಸೇರಿಸಲಾಗಿದೆ ಎಂದರು.ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೆಎಸ್‍ಎಂಸಿಎ 1 ಕೋಟಿ ರು ದೇಣಿಗೆ

ತಿದ್ದುಪಡಿ ಕಾಯ್ದೆಯಂತೆ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದರೇ ಗಲ್ಲುಶಿಕ್ಷೆ ವಿಧಿಸೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗ್ಯಾಂಗ್ ರೇಪ್ ಮಾಡಿದವರಿಗೆ 20 ವರ್ಷ ಶಿಕ್ಷೆ ವಿಧಸಲಾಗುತ್ತದೆ. 20 ವರ್ಷ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!