ಎಸ್ . ಎಂ . ಕೃಷ್ಣ ಮೊಮ್ಮಗ , ಡಿಕೆಶಿ ಅಳಿಯ ಅಮರ್ತ್ಯ ಹೆಗ್ಡೆ ಮದ್ದೂರು ಕ್ಷೇತ್ರದ ಕೈ ಅಭ್ಯರ್ಥಿ ?

Team Newsnap
2 Min Read

ಮಂಡ್ಯ ರಾಜಕಾರಣ ಮತ್ತೆ ಮತ್ತೆ ಗರಿಗೆದರುತ್ತಲೇ ಇದೆ. ಹಿರಿಯ ರಾಜಕಾರಣಿ , ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮೊಮ್ಮಗ . ಡಿಕೆಶಿ ಅಳಿಯ ಅಮರ್ತ್ಯ ಹೆಗ್ಡೆ ಮದ್ದೂರು ರಾಜಕಾರಣಕ್ಕೆ ಎಂಟ್ರಿ ಆಗಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬ ವದಂತಿಗಳು ಗರಿಗೆದರಿವೆ.

sm krishna m

ಅಳಿಯ ಸಿದ್ದಾರ್ಥ ಹೆಗ್ಡೆ ನಿಧನದ ನಂತರ ಬಿಜೆಪಿಯಿಂದಲೂ ಕೂಡ ಹಿಂದೆ ಸರಿದಿರುವ ಎಸ್ ಎಂ ಕೃಷ್ಣ , ಶಿಷ್ಯನೂ ಆದ ಮೊಮ್ಮಗನ ಮಾವ ಡಿ ಕೆ ಶಿವಕುಮಾರ್ ಗೆ ಸಾಥ್ ಕೊಡಲು ನಿರ್ಧರಿಸಿ , ಮೊಮ್ಮಗ ಅಮರ್ತ್ಯನಿಗೆ ಮದ್ದೂರು ವಿಧಾನ ಸಭೆ ಟಿಕೆಟ್ ಕೊಡಿಸಿ, ಹೊಸ ರಾಜಕೀಯ ದಾಳ ಹಾಕಲು ಗುರು – ಶಿಷ್ಯರು ಬಿಗ್ ಪ್ಲಾನ್ ಮಾಡಿದ್ದಾರೆ,

ಇದೊಂದು ಮಂಡ್ಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ. ಅದೂ ಅಲ್ಲದೆ ಕುತೂಹಲಕ್ಕೆ ಕಾರಣವೂ ಆಗಲಿದೆ.

ಈ ಮೊದಲು ಎಸ್ ಎಂ ಕೃಷ್ಣ ಅವರ ಸಹೋದರನ ಪುತ್ರ ಜಿಪಂ ಮಾಜಿ ಅಧ್ಯಕ್ಷ ಗುರುಚರಣ್ ಗೆ ಕಾಂಗ್ರೆಸ್ ಟಿಕೆಟ್ ಎಂದು ಬಿಂಬಿಸಲಾಗಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಮ್ಮ ಅಳಿಯನನ್ನೇ ಕಣಕ್ಕೆ ಇಳಿಸಿ, ಮದ್ದೂರು ವಿಧಾನ ಸಭಾ ಕ್ಷೇತ್ರವನ್ನು ಗೆಲ್ಲುವ ರಣತಂತ್ರ ರೂಪಿಸಿದ್ದಾರೆ.

ಅಮರ್ತ್ಯ ಹೆಗ್ಡೆ ಗೆ ರಾಜಕಾರಣದಲ್ಲಿ ಇಷ್ಟ ಇದೆ ಇಲ್ಲವೊ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ . ಆದರೆ ತಾತ ಎಸ್ . ಎಂ.ಕೃಷ್ಣ ಹಾಗೂ ಮಾವ ಡಿಕೆಶಿ ಭುಜಬಲದ ನೆರವಿನಿಂದ ರಾಜಕಾರಣವನ್ನೂ ಸಹ ಒಂದು ಕೈ ನೋಡೊಣ ಎಂಬ ಉದ್ದೇಶದಿಂದ ಮದ್ದೂರಿನಿಂದಲೇ ದಾಳ ಉರುಳಿಸುವ ಪ್ರಯತ್ನ ಭರದಿಂದ ತೆರೆ ಮೆರೆಯಲ್ಲಿ ಸಾಗಿದೆ.

ಇದನ್ನು ಓದಿ : ಸುಮಲತಾ ಬಿಜೆಪಿ ಸೇರಲು ವಿಧಿಸಿರುವ ಮೂರು ಷರತ್ತುಗಳು ? ಬಿಜೆಪಿ ನಾಯಕರಿಗೆ ಬಿಸಿ ತುಪ್ಪ

ಅಮರ್ತ್ಯನ ತಂದೆ ಸಿದ್ದಾರ್ಥ ಎಂದೂ ರಾಜನಾಗುವ ಹಾದಿ ತುಳಿಯಲಿಲ್ಲ, ಕಿಂಗ್ ಮೇಕರ್ ಆಗಿದ್ದರು. ಮಾವ ಕೃಷ್ಣನಿಗೆ ಸಿದ್ದಾರ್ಥ ಸಾರಥಿಯಾಗಿದ್ದರು. ತಾಯಿ ಶಾಂಭವಿ ಸಿದ್ದಾರ್ಥಳನ್ನು ಆಗಾಗ್ಗೆ ರಾಜಕಾರಣಕ್ಕೆ ಕರೆ ತರುವ ಪ್ರಯತ್ನ. ನಡೆದರೂ ಫಲ ಸಿಕ್ಕಿರಲಿಲ್ಲ. ಕೃಷ್ಣ ಅಭಿಮಾನಿಗಳು ಶಾಂಭವಿಯನ್ನು ಮದ್ದೂರು ವಿಧಾನ ಸಭಾ ಕ್ಷೇತ್ರದಿಂದ ಅಥವಾ 2013 ರ ಲೋಕಸಭಾ ಉಪ ಲೋಕಸಭಾ ಉಪ ಚುನಾವಣೆಗೆ ನಟಿ ರಮ್ಯಾ ಬದಲು ಕಾಂಗ್ರೆಸ್ ನಿಂದ ಶಾಂಭವಿಗೆ ಟಿಕೆಟ್ ಕೊಡಿಸಿ ಎಂದು ಕೃಷ್ಣ ಸಾಹೇಬ್ರಿಗೆ ಭಾರಿ ಒತ್ತಡ ಬಂದರೂ ಶಾಂಭವಿ ಮಾತ್ರ ಜಪ್ಪಯ್ಯ ಅಂದ್ರೂ ಒಪ್ಪಲಿಲ್ಲ.

ಈಗ ಮಗ ಅಮರ್ತ್ಯ ಹೆಗ್ಡೆ ನನ್ನು ರಾಜಕೀಯ ತರುವ ಅಥವಾ ದೂರ ಇಡುವ ನಿರ್ಧಾರವನ್ನೂ ಶಾಂಭವಿಯವರೇ ಮಾಡಬೇಕಾ ಅಥವಾ ತಾತ ಕೃಷ್ಣ – ಮಾವ ಡಿಕೆಶಿ ಏನು ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕು.

Share This Article
Leave a comment