30ರಂದು ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕ

Team Newsnap
1 Min Read
'All Right Mantra Mangalya' drama on 30th 30ರಂದು 'ಆಲ್ ರೈಟ್ ಮಂತ್ರ ಮಾಂಗಲ್ಯ' ನಾಟಕ #MYSURU #Drama #NEWS #Kannadanews

ಮೈಸೂರು: ರಂಗಕರ್ಮಿ ಮೈಮ್ ರಮೇಶ್ ಅವರ ಜಿಪಿಐಇಆರ್ ತಂಡವು ಜುಲೈ 30ರಂದು ಸಂಜೆ 7 ಗಂಟೆಗೆ ನಗರದ ಕಲಾಮಂದಿರ ಪಕ್ಕದ ಕಿರು ರಂಗಮಂದಿರದಲ್ಲಿ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕ ಪ್ರಸ್ತುತಪಡಿಸಲಿದೆ.

ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಅವರ ಹೊಸ ನಾಟಕ ಇದಾಗಿದ್ದು, ಕುವೆಂಪು ಅವರ ಮಂತ್ರ ಮಾಂಗಲ್ಯ ಆಧರಿಸಿದೆ.

ಈ ನಾಟಕದ ವಿನ್ಯಾಸ ಹಾಗೂ ನಿರ್ದೇಶನ ರಂಗಾಯಣದ ಕಲಾವಿದರಾಗಿದ್ದ ಮೈಮ್ ರಮೇಶ್ ಅವರದು. ಎನ್ ಎಸ್ ಡಿ ಪದವೀಧರ ಜಗದೀಶ್ ಆರ್.ಜಾಣಿ ಸಂಗೀತ ನೀಡಲಿದ್ದಾರೆ.ಭಾರೀ ಮಳೆ: ಹಾಸನ-ಮೈಸೂರು ರಸ್ತೆಯ ಫ್ಲೈಓವರ್ ಸ್ಲ್ಯಾಬ್ ಕುಸಿತ

ನಾಟಕಕ್ಕೆ ಮುನ್ನ ನಾಟಕದ ಕೃತಿಯು ಪ್ರೇಕ್ಷಕರಿಂದ ಬಿಡುಗಡೆಗೊಳ್ಳಲಿದೆ ಎಂದು ಜಿಪಿಐಇಆರ್ ತಂಡದ ಸಂಚಾಲಕ ಎಂ.ಪಿ.ಹರಿದತ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a comment