ಜೆಡಿಎಸ್ ನಿಂದ ಮಡಿಕೇರಿಯಲ್ಲಿ ಸರ್ವಜನಾಂಗದ ಶಾಂತಿಯ ತೋಟ’ ಸಮಾವೇಶ

Team Newsnap
1 Min Read

ಕೊಡಗಿನಲ್ಲಿ ಜನತೆಗೆ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಜಾರಿ ಮಾಡಿರುವ ನಿಷೇಧಾಜ್ಞೆ ತೆರವಾದ ನಂತರ ಮಡಿಕೇರಿಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಸಮಾವೇಶವನ್ನು ಜೆಡಿಎಸ್ ನಿಂದ ಹಮ್ಮಿಕೊಳ್ಳಲಾಗುವುದು

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ತಿಳಿಸಿ ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿರುವ ಸುಂದರ ಕೊಡಗನ್ನು ಹಿಂಸೆಪೀಡಿತ ಪ್ರಕ್ಷುಬ್ಧ ಜಮ್ಮು ಕಾಶ್ಮೀರವನ್ನಾಗಿ ಮಾಡುವ ರಾಷ್ಟ್ರೀಯ ಪಕ್ಷಗಳ ಹುನ್ನಾರವನ್ನು ಬುಡಮೇಲು ಮಾಡಿ, ಆ ಜನರ ಬದುಕು ಮತ್ತು ಆ ನೆಲದ ವೀರ, ಶೌರ್ಯ ಪರಂಪರೆಗೆ ಧಕ್ಕೆ ಆಗದಂತೆ ಮಾಡಬೇಕಿದೆ ಎಂದು ಹೇಳಿದ್ದಾರೆ.ಇದನ್ನು ಓದಿ –ಮುಂಬೈನ ಗಣಪತಿಗೆ 316.40 ಕೋಟಿ ರೂ. ವಿಮೆ

ನಿಷೇದಾಜ್ಞೆ ತೆರವಾದ ಕೂಡಲೇ ಶೀಘ್ರವೇ ಮಡಿಕೇರಿಯಲ್ಲಿ ಪಕ್ಷದಿಂದ ಸರ್ವಜನಾಂಗದ ಶಾಂತಿಯ ತೋಟ ಸಮಾವೇಶ ಹಮ್ಮಿಕೊಳ್ಳಲಾಗುವುದು. ಸರ್ವ ಸಮಸ್ಯೆಗಳಿಗೆ ಶಾಂತಿಯೊಂದೇ ಪರಿಹಾರ. ಕೊಡಗು ಜನರ ಒಳಿತೊಂದೇ ಜೆಡಿಎಸ್ ಗುರಿ. ಕರಾವಳಿಯ ರೀತಿಯಲ್ಲೇ ಕೊಡಗಿನಲ್ಲಿಯೂ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಇದಕ್ಕೆ ಪ್ರೋತ್ಸಾಹ ಕೊಡಬೇಡಿ ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.

ಸೌಹಾರ್ದಯುತ ನಾಡಿನ ಜನತೆಗೆ ಜಾಗೃತಿ ಮೂಡಿಸಬೇಕು. ಜನ ಶಾಂತಿಯಿಂದ ಬದುಕಲು ಕಾಪಾಡಬೇಕು. ಕೊಡಗಿನಲ್ಲಿ 144 ಸೆಕ್ಷನ್‌ ಮುಗಿದ ನಂತರ ನಾನು ಮತ್ತು ನಮ್ಮ ಪಕ್ಷದ ಅಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಸೇರಿ ಕೊಡಗಿಗೆ ಹೋಗಿ ಶಾಂತಿ ಸಭೆ ನಡೆಸುತ್ತಿವೆ ಎಂದು ಹೇಳಿದರು.

Share This Article
Leave a comment