February 5, 2023

Newsnap Kannada

The World at your finger tips!

sonia , AICC , election

AICC Presidential Election - Sonia to Mysore to discuss with her son ಎಐಸಿಸಿ ಅಧ್ಯಕ್ಷೀಯ ಚುನಾವಣೆ - ಪುತ್ರನೊಂದಿಗೆ ಚರ್ಚಿಸಲು ಸೋನಿಯಾ ಕೆಲ ಹೊತ್ತಿನಲ್ಲಿ ಮೈಸೂರಿಗೆ

ಎಐಸಿಸಿ ಅಧ್ಯಕ್ಷೀಯ ಚುನಾವಣೆ – ಪುತ್ರನೊಂದಿಗೆ ಚರ್ಚಿಸಲು ಸೋನಿಯಾ ಕೆಲ ಹೊತ್ತಿನಲ್ಲಿ ಮೈಸೂರಿಗೆ

Spread the love

ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಎರಡು ದಿನಗಳು ರಾಜ್ಯ ಪ್ರವಾಸ ಮಾಡಲಿದ್ದಾರೆ .

ಇಂದು ಮಧ್ಯಾಹ್ನವೇ ಮೈಸೂರಿಗೆ ಆಗಮಿಸುವ ಸೋನಿಯಾ ಮಡಿಕೇರಿಗೆ ಹೋಗಲಿದ್ದಾರೆ. ಯಾತ್ರೆಯಲ್ಲಿರುವ ರಾಹುಲ್ ಕೂಡ ಎರಡು ದಿನ ಯಾತ್ರೆಗೆ ರಜೆ ಮಾಡಿ ಪಾಂಡವಪುರದಿಂದ ನೇರವಾಗಿ ಹೆಲಿಕ್ಯಾಪ್ಟರ್ ನಲ್ಲಿ ಮಡಿಕೇರಿಗೆ ಹೋಗಲಿದ್ದಾರೆ.ಇದನ್ನು ಓದಿ –ಕೆನಡಾದಲ್ಲಿ ‘ಭಗವದ್ಗೀತೆ ಪಾರ್ಕ್’​ ಧ್ವಂಸ; ಭಾರತದ ಖಂಡನೆ


ಎಐಸಿಸಿ ಅಧ್ಯಕ್ಷೀಯ ಚುನಾವಣೆ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಇಂದು ಬೆಳಗ್ಗೆ ದೆಹಲಿಯಿಂದ ಹೊರಟು ಮೈಸೂರು ವಿಮಾನ ನಿಲ್ದಾಣಕ್ಕೆ ಸೋನಿಯಾ ಗಾಂಧಿ ಆಗಮಿಸಲಿದ್ದಾರೆ. ನಂತರ ಹೆಲಿಕಾಪ್ಟರ್‌ ಮೂಲಕ ಮಡಿಕೇರಿ ತಲುಪಲಿದ್ದಾರೆ. ನಂತರ ರಾಹುಲ್‌ ಗಾಂಧಿ ಜೊತೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಎಐಸಿಸಿ ಅಧ್ಯಕ್ಷ ಚುನಾವಣೆಯ ರಾಜಕೀಯ ಈಗ ದೆಹಲಿಯಿಂದ ಮಡಿಕೇರಿಗೆ ಶಿಫ್ಟ್ ಆಗುತ್ತಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಕಣದಲ್ಲಿ ಇದ್ದಾರೆ.


ಹೈಕಮಾಂಡ್ ಒಲವು ಮಾತ್ರ ಖರ್ಗೆ ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ಆ ಕುರಿತ ಮಹತ್ವದ ಚರ್ಚೆ ಮಡಿಕೇರಿಯ ರೆಸಾರ್ಟ್‌ನಲ್ಲಿ ನಡೆಯಲಿದೆ.

ಎಐಸಿಸಿ ಚುನಾವಣೆ ಬಗ್ಗೆ ಚರ್ಚಿಸಲು ಸೋನಿಯಾ ಜೊತೆ ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್ ಮಡಿಕೇರಿಗೆ ತೆರಳಲಿದ್ದು ಮಹತ್ವದ ಚರ್ಚೆ ನಡೆಸಲಿದ್ದಾರೆ.

error: Content is protected !!