ಇದನ್ನು ಓದಿ –ಜೂ.13ರಿಂದ ಎರಡು ದಿನ ರಾಷ್ಟ್ರಪತಿ ಕೋವಿಂದ್ ಕರ್ನಾಟಕ ಭೇಟಿ
ಈ ಮೂಲಕ ಭಾರತ ಸೇನೆಗೆ ಮತ್ತಷ್ಟು ಬಲ ಬಂದಿದೆ . 4000 ಕಿ.ಮೀ. ದೂರದಿಂದಲೇ ಶತ್ರುಪಡೆಗಳಿಗೆ ಗುರಿ ಇಡಬಹುದಾಗಿದೆ. ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ರಾತ್ರಿ 7.30ರ ಸುಮಾರಿಗೆ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ.
ಅಗ್ನಿ-IV ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯು ದೇಶದ ಸೇನಾ ಸಾಮರ್ಥ್ಯದ ಗಮನಾರ್ಹ ಹೆಚ್ಚಳದ ಸಂಕೇತವಾಗಿದೆ ಎಂದು ರಕ್ಷಣಾ ಸಚಿವಾಲಯ ಬಣ್ಣಿಸಿದೆ.
ಅಗ್ನಿ-4 ರ ಯಶಸ್ವಿ ಪರೀಕ್ಷೆಯು ಭಾರತದ ‘ವಿಶ್ವಾಸಾರ್ಹ ಕನಿಷ್ಠ ತಡೆ’ ನೀತಿಯನ್ನು ಪುನರುಚ್ಚರಿಸುತ್ತದೆ.
ಅಗ್ನಿ-4 ಕ್ಷಿಪಣಿಯು ಅಗ್ನಿ ಸರಣಿಯ 4ನೇ ಮಿಸೈಲ್ ಆಗಿದೆ. ಈ ಹಿಂದೆ ಅಗ್ನಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣಿ ಯಶಸ್ವಿಯಾಗಿತ್ತು. ಅಗ್ನಿ-2 ಕ್ಷಿಪಣಿಯು 1000 ದಿಂದ 2000 ಕಿ.ಮೀ. ಗುರಿ ವ್ಯಾಪ್ತಿ ಹೊಂದಿತ್ತು. ಇದೀಗ ಅಗ್ನಿ -4 ಕ್ಷಿಪಣಿ ಕೂಡ ಯಶಸ್ವಿಯಾಗಿದೆ, ಇದು ಅಗ್ನಿ ಸರಣಿಯ ಕ್ಷಿಪಣಿಗಳಲ್ಲಿ ಸುಧಾರಿತ ಸರಣಿಯಾಗಿದೆ. ಈ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಅಭಿವೃದ್ಧಿಪಡಿಸಿದೆ. ಈ ಮೂಲಕ ಭಾರತ ಸೇನೆ ಬತ್ತಳಿಕೆಗೆ ಮತ್ತೊಂದು ಪ್ರಬಲ ಅಸ್ತ್ರ ಸೇರ್ಪಡೆಯಾದಂತಾಗಿದೆ.
ಕ್ಷಿಪಣಿ ಪರೀಕ್ಷೆಯು ಎಲ್ಲಾ ಕಾರ್ಯಾಚರಣೆಗಳು ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು