6 ವರ್ಷಗಳ ನಂತರ ದೇವೇಗೌಡರ ಮನೆಗೆ ಸಿದ್ದರಾಮಯ್ಯ ಸೋಮವಾರ ಸಂಜೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು, ಆದರೆ ಈ ಭೇಟಿ ರಾಜ್ಯ ರಾಜಕಾರಣದಲ್ಲಿ ಕೂತುಹಲ ಮೂಡಿಸಿದೆ. ವಿಧಾನಸಭೆ ಕಲಾಪ ಮುಗಿದ ಕೂಡಲೇ ಪದ್ಮನಾಭ ನಗರದ ನಿವಾಸಕ್ಕೆ ತೆರಳಿ ಸಿದ್ದರಾಮಯ್ಯ ದೇವೇಗೌಡರನ್ನು ಭೇಟಿಯಾದರು. ಶಾಸಕರಾದ ಜಮೀರ್, ಭೈರತಿ ಸುರೇಶ್ ಸಾಥ್ ನೀಡಿದರು.
ಜೆಡಿಎಸ್ ವಲಯದಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ಸಿದ್ದರಾಮಯ್ಯ 2005 ರಲ್ಲಿ ಅಹಿಂದ ಸಮಾವೇಶದ ನಂತರ ಜೆಡಿಎಸ್‌ನಿಂದ ಹೊರ ಬಂದು ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾದದ್ದು ಈಗ ಇತಿಹಾಸ. ಸಂಸದೆ ಆಣೆ – ಪ್ರಮಾಣದ ಸವಾಲು ಸ್ವೀಕರಿಸಿದ ಶಾಸಕ ಪುಟ್ಟರಾಜು: ದಿನಾಂಕ, ಸಮಯ ನಿಗದಿ ಮಾಡಿ – ಪ್ರತಿ ಸವಾಲು
ರಾಜ್ಯಸಭೆ ಸದಸ್ಯರಾಗಿರುವ ದೇವೇಗೌಡರು ಕಳೆದ ಕೆಲ ದಿನಗಳಿಂದ ಕಾಲು ನೋವಿನ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ದೇವೇಗೌಡರ ಮನೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ಶೀಘ್ರ ಗುಣಮುಖರಾಗುವಂತೆ ಆಶಿಸಿದರು.
More Stories
ಹೆಚ್ಡಿಕೆ ಬ್ರಾಹ್ಮಣ ವಿರೋಧಿ ಹೇಳಿಕೆ: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಮುಳುವು ?
‘ಅಂಬೇಡ್ಕರ್ ಅಭಿವೃದ್ಧಿ ನಿಗಮ’ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಬ್ರಾಹ್ಮಣರು ಸಿಎಂ ಆಗಬಾರದು ಅಂತ ಎಲ್ಲಿದೆ ? ಪೇಜಾವರ ಶ್ರೀ